Tuesday, May 26, 2026
Google search engine
Homeಅಪರಾಧವಿವಾಹಿತೆಯನ್ನು ಬಾವಿಗೆ ತಳ್ಳಿ ಪ್ರಿಯಕರ ತಾನೂ ಆತ್ಮಹತ್ಯೆ!

ವಿವಾಹಿತೆಯನ್ನು ಬಾವಿಗೆ ತಳ್ಳಿ ಪ್ರಿಯಕರ ತಾನೂ ಆತ್ಮಹತ್ಯೆ!

ವಿವಾಹಿತೆಯನ್ನು ಬಾವಿಗೆ ತಳ್ಳಿದ ಪ್ರಿಯಕರ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆದಿದೆ.

ಮೂಡುಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಗ್ರಾಮದ ನಿವಾಸಿ ನಮೀಕ್ಷಾ ಶೆಟ್ಟಿ ಮತ್ತು ಮೂಲತಃ ಬಾಗಲಕೋಟೆಯ ನಿವಾಸಿ ನಿಡ್ಡೋಡಿಯ ಪ್ರಶಾಂತ್ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.

ಪ್ರಶಾಂತ್ ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದು ಮದುವೆ ಆಗಿ ವಿಚ್ಛೇದನ ಪಡೆದಿದ್ದ. ಮತ್ತೊಂದೆಡೆ ನಮೀಕ್ಷಾ ಶೆಟ್ಟಿಗೆ ಸಂಸಾರದಲ್ಲಿ ಮನಸ್ತಾಪ ಉಂಟಾಗಿ ಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದರು.

ಇಬ್ಬರು ಪರಸ್ಪರ ಇನ್ ಸ್ಟಾಗ್ರಾಂನಲ್ಲಿ ಪರಿಚಯ ಆಗಿದ್ದು, ಆಗಾಗ ಪ್ರಶಾಂತ್ ಮನೆಗೆ ಬಂದು ಹೋಗುತ್ತಿದ್ದ. ಬುಧವಾರ ಮನೆಯಲ್ಲಿ ಯಾರೂ ಇಲ್ಲದಾಗ ಪ್ರಶಾಂತ್ ಬಂದಾಗ ಇಬ್ಬರ ನಡುವೆ ಜಗಳ ಆಗಿದೆ.

ಕೋಪದಲ್ಲಿ ನಮೀಕ್ಷಾಳನ್ನು ಪಕ್ಕದಲ್ಲಿದ್ದ ಬಾವಿಗೆ ತಳ್ಳಿದ್ದಾನೆ. ಈ ವೇಳೆ ನಮೀಕ್ಷಾ ಪುತ್ರ ನೋಡಿದ್ದನ್ನು ಗಮನಿಸಿ ಗಾಬರಿಯಾದ ಪ್ರಶಾಂತ್ ಕೂಡ ಬಾವಿಗೆ ಹಾರಿದ್ದಾನೆ. ಇಬ್ಬರೂ ಬಾವಿಯಲ್ಲಿ ಮೃತಪಟ್ಟಿದ್ದು, ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದಾರೆ. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments