ಮಾಲ್ಡಿವ್ಸ್ ನೂತನ ಅಧ್ಯಕ್ಷ ಮೊಹಮದ್ ಮುಯಿಜು ವಿರುದ್ಧ ಮಾಟಮಂತ್ರ ಮಾಡಿಸಿದ್ದಕ್ಕಾಗಿ ಇಬ್ಬರು ಸಚಿವರನ್ನು ಮಾಲ್ಡಿವ್ಸ್ ಪೊಲೀಸರು ಬಂಧಿಸಿದ್ದಾರೆ.
ಪರಿಸರ ಖಾತೆ ಸಚಿವೆ ಶಮಾನ್ಜ್ ಸಲೀಂ ಹಾಗೂ ಅವರ ಮಾಜಿ ಪತಿ ಮತ್ತು ಅಧ್ಯಕ್ಷರ ಕಚೇರಿಯ ಸಚಿವರಾಗಿರುವ ಆಡಂ ರಮೀಜ್ ಅಲ್ಲದೇ ಮತ್ತಿಬ್ಬರನ್ನು ಬಂಧಿಸಲಾಗಿದೆ.
ಭಾನುವಾರ ಪೊಲೀಸರು ಶಮಾನ್ಜ್ ಹಾಗೂ ಮತ್ತಿಬ್ಬರನ್ನು ಬಂಧಿಸಿದ್ದು, ಮೂವರಿಗೂ 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಮಾನ್ಜ್ ಅವರನ್ನು ಪರಿಸರ ಸಚಿವ ಸ್ಥಾನದಿಂದ ಅಮಾನತು ಮಾಡಲಾಗಿದ್ದು, ರಮೀಜ್ ಅವರನ್ನು ಗುರುವಾರ ಸೇವೆಯಿಂದ ಅಮಾನತು ಮಾಡಲಾಗಿದೆ. ಪೊಲೀಸರ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಮುಜಿಜು ಮೇಲ್ ಸಿಟಿ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಅವರ ಜೊತೆ ಸದಸ್ಯರಾಗಿ ಶಮಾನ್ಜ್ ಹಾಗೂ ರಮೀಜ್ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮುಜಿಜು ಕಳೆದ ನವೆಂಬರ್ ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದಾಗ ರಾಜ್ಯ ಸಚಿವರಾಗಿ ನೇಮಕಗೊಂಡಿದ್ದು, ನಂತರ ಪರಿಸರ ಖಾತೆ ಸಚಿವ ಸ್ಥಾನ ನೀಡಲಾಗಿತ್ತು.
ಮಾಲ್ಡಿವ್ಸ್ ಅಧ್ಯಕ್ಷರ ಮೇಲೆ ಆಪ್ತರೇ ಮಾಟಮಂತ್ರ ಮಾಡಿಸಿದ್ದೇಕೆ ಹಿಂದಿನ ಕಾರಣ ಏನಿರಬಹುದು ಎಂಬುದು ತಿಳಿದು ಬಂದಿಲ್ಲ