Sunday, November 24, 2024
Google search engine
HomeUncategorizedರಷ್ಯಾ ನೆಲೆಗಳ ಮೇಲೆ ಬೆಂಕಿ ಉಗುಳಿದ ಉಕ್ರೇನ್ ಡ್ರ್ಯಾಗನ್ ಡ್ರೋನ್!

ರಷ್ಯಾ ನೆಲೆಗಳ ಮೇಲೆ ಬೆಂಕಿ ಉಗುಳಿದ ಉಕ್ರೇನ್ ಡ್ರ್ಯಾಗನ್ ಡ್ರೋನ್!

ರಷ್ಯಾ ಆಕ್ರಮಿಸಿಕೊಂಡ ಖಾರ್ಕಿವ್ ಪ್ರದೇಶದ ನೆಲೆಗಳ ಮೇಲೆ ರಷ್ಯಾದ ಡ್ರ್ಯಾಗನ್ ಡ್ರೋನ್ ಗಳು ಬೆಂಕಿ ಮಳೆ ಸುರಿಸಿ ಅಪಾರ ಹಾನಿಗೊಳಿಸಿದೆ.

ರಷ್ಯಾ ಹಿಡಿತದಲ್ಲಿರುವ ಖಾರ್ಕಿವ್ ಪ್ರದೇಶಗಳಲ್ಲಿನ ರಷ್ಯಾ ಸೇನೆ ನೆಲೆಸಿರುವ ಮರಗಳು ಮತ್ತು ವಾಹನಗಳನ್ನು ಗುರಿಯಾಗಿಸಿ ಥರ್ಮೈಟ್ ಬೆಂಕಿ ಉಗುಳುವ ಬಾಂಬ್ ಗಳ ದಾಳಿ ನಡೆಸಿದೆ.

ಬೆಂಕಿ ಉಗುಳಿದ ಬಾಂಬ್ ಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆದರೆ ಈ ವೀಡಿಯೊದಲ್ಲಿ ದಿನಾಂಕ ಇಲ್ಲದ ಕಾರಣ ಯಾವ ಸಮಯದಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ.

ಅಲ್ಯೂಮಿನಿಯಂ ಪೌಡರ್ ಮತ್ತು ಐರನ್ ಆಕ್ಸೈಡ್ ಮಿಶ್ರಣ ಹೆಚ್ಚಿನ ತಾಪಮಾನದಲ್ಲಿ ಉರಿಯುತ್ತದೆ. ಕರಗಿದ ಲೋಹವು ಮರಗಳು, ಕೋಟೆಗಳು ಮತ್ತು ಲೋಹಗಳನ್ನು ತ್ವರಿತವಾಗಿ ಸುಡುತ್ತದೆ, ಮಿಲಿಟರಿ ವಾಹನಗಳು ಮತ್ತು ರಕ್ಷಾ ಕವಚವನ್ನು ನಿಷ್ಪ್ರಯೋಜಕಗೊಳಿಸುತ್ತದೆ.

ಉಕ್ರೇನ್‌ನ 60ನೇ ಯಾಂತ್ರಿಕೃತ ಬ್ರಿಗೇಡ್ ಥರ್ಮೈಟ್ ಬಾಂಬ್ ದಾಳಿಯ ಡ್ರೋನ್ ದೃಶ್ಯಗಳನ್ನು ಹಂಚಿಕೊಂಡಿದೆ. `ಸ್ಟ್ರೈಕ್ ಡ್ರೋನ್‌’ ಗಳು ನಮ್ಮ ಪ್ರತೀಕಾರದ ರೆಕ್ಕೆಗಳು, ಆಕಾಶದಿಂದ ನೇರವಾಗಿ ಬೆಂಕಿಯನ್ನು ತರುತ್ತವೆ! ಶತ್ರುಗಳ ನಿಖರವಾದ ನಲೆಗಳನ್ನು ಸುಟ್ಟು ಹಾಕುವ ಇವು ಶತ್ರುಗಳಿಗೆ ನಿಜವಾದ ಸವಾಲು ಆಗಿದೆ.

ಇದು ವಿಶ್ವದ ಅತ್ಯಂತ ಅಪಾಯಕಾರಿ ಶಸ್ತ್ರಾಸ್ತ್ರ ಎಂದು ಹೇಳಲಾಗಿದ್ದು, ಇದೇ ಮೊದಲ ಬಾರಿಗೆ ರಷ್ಯಾ ಯುದ್ಧದಲ್ಲಿ ಬಳಸಲಾಗಿದೆ. ಈ ದಾಳಿಯಿಂದ ಎಷ್ಟು ದೊಡ್ಡ ಪ್ರಮಾಣದಲ್ಲಿ ರಷ್ಯಾಗೆ ಹಾನಿಯಾಗಿದೆ ಎಂಬ ವಿವರ ಬೆಳಕಿಗೆ ಬಂದಿಲ್ಲ.

2023ರಲ್ಲಿ ರಷ್ಯಾ ಪೂರ್ವ ಉಕ್ರೇನ್ ವುಹ್ಲೆದರ್ ಮೇಲೆ ಇದೇ ರೀತಿಯ ಬಾಂಬ್ ದಾಳಿ ನಡೆಸಿತ್ತು. ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ದಾಳಿ ನಡೆಸಿತ್ತು. ಆದರೆ ಉಕ್ರೇನ್ ರಷ್ಯಾ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಬೆಂಕಿಯನ್ನು ನಂದಿಸಲು ರಷ್ಯಾ ಬಿ-21 ಮಲ್ಟಿ-ರಾಕೆಟ್ ಲಾಂಚರ್ ಸಿಸ್ಟಮ್‌ನಿಂದ ಉಡಾವಣೆಯಾದ 122 ಎಎಂಎಂ  ಗ್ರಾಡ್ 9ಎಂ22ಎಸ್ ರಾಕೆಟ್ ಗಳಲ್ಲಿ ಅಶ್ರುವಾಯು ಸಿಡಿತಲೆ ಬಳಸಿ ಈ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments