Sunday, June 14, 2026
Google search engine
Homeದೇಶಸ್ವದೇಶಿ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ 14,150 ಕೋಟಿ ರೂ. ಬೃಹತ್ ಯೋಜನೆ ಘೋಷಿಸಿದ ಕೇಂದ್ರ ಸಚಿವ...

ಸ್ವದೇಶಿ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ 14,150 ಕೋಟಿ ರೂ. ಬೃಹತ್ ಯೋಜನೆ ಘೋಷಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 4,150 ಕೋಟಿ ರೂ. ಮೊತ್ತದ ಬೃಹತ್‌ ಹೂಡಿಕೆ ಯೋಜನೆಯನ್ನು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ದೆಹಲಿಯ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭೂಸಾರಿಗೆ ಕ್ಷೇತ್ರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂಬ ಪ್ರಧಾನಿಗಳ ಸಂಕಲ್ಪವನ್ನು ಈಡೇರಿಸುವ ಗುರಿಯೊಂದಿಗೆ ಈ ಹೂಡಿಕೆ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ಏನಿದು ಯೋಜನೆ?:

ಭಾರತದಲ್ಲಿ ಎಲೆಕ್ಟ್ರಿಕ್ ಪ್ರಯಾಣಿಕರ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆ (SPMECPI) ಎಂದು ಕರೆಲಾಗುತ್ತದೆ.  ಈ ಉಪಕ್ರಮ ಭಾರತವನ್ನು ಎಲೆಕ್ಟ್ರಿಕ್ ವಾಹನ (EV) ಉತ್ಪಾದನೆಗೆ ಜಾಗತಿಕ ಕೇಂದ್ರವನ್ನಾಗಿ ಮಾಡಲು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೈಗೊಂಡಿರುವ ಒಂದು ಪ್ರಮುಖ ಪ್ರಯತ್ನವಾಗಿದೆ ಎಂದು ಸಚಿವರು ಬಣ್ಣಿಸಿದರು.

ಈ ಯೋಜನೆಯು ಜಾಗತಿಕ ಮಟ್ಟದ ಎಲೆಕ್ಟ್ರಿಕ್ ವಾಹನ ತಯಾರಕರನ್ನು ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ದೇಶಿಯವಾಗಿಯೇ ಕಾರುಗಳನ್ನು ತಯಾರಿಸಲು ಆಕರ್ಷಿಸುವ ಗುರಿಯನ್ನು ಹೊಂದಿದೆ. ಮೂರು ವರ್ಷಗಳಲ್ಲಿ ₹4,150 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಸುಸ್ಥಿರ ಚಲನಶೀಲತೆಯತ್ತ ನಿರ್ದಿಷ್ಟವಾದ ಬದಲಾವಣೆಯನ್ನು ವೇಗಗೊಳಿಸಲು ವಿದೇಶಿ ಬಂಡವಾಳವನ್ನು ಸ್ಥಳೀಯ ಉತ್ಪಾದನೆಯೊಂದಿಗೆ ಸಂಯೋಜಿಸಲು ಯೋಜನೆಯು ಪೂರಕವಾಗಿರುತ್ತದೆ. ಮಾರ್ಚ್ 15, 2024 ರಂದು ಭಾರೀ ಕೈಗಾರಿಕಾ ಸಚಿವಾಲಯವು ಈ ಯೋಜನೆಗಾಗಿ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು ಎಂದು ಸಚಿವರು ಹೇಳಿದರು.

ಈ ಯೋಜನೆಯು ಪ್ರಯಾಣಿರ ವಾಹನ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.  ಪ್ರಧಾನಮಂತ್ರಿಗಳ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಆರ್ಥಿಕ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಈ  ಮೂರು ಗುರಿಗಳನ್ನು ಒಟ್ಟೊಟ್ಟಿಗೆ ಸಾಕಾರಗೊಳಿಸುವ ಉದ್ದೇಶವನ್ನು ಯೋಜನೆ ಹೊಂದಿದೆ” ಎಂದು ಅವರು ಹೇಳಿದರು.

ವಿದ್ಯುತ್ ಚಾಲಿತ ವಾಹನ ತಯಾರಕರಿಗೆ ಭಾರತೀಯ ಮಾರುಕಟ್ಟೆಯನ್ನು ಹೆಚ್ಚು ಆಕರ್ಷಕವಾಗಿಸಲು ಈ ಯೋಜನೆಯು ಗಮನಾರ್ಹ ಪ್ರೋತ್ಸಾಹವನ್ನು ನೀಡುತ್ತದೆ. ಈ ಯೋಜನೆ ಅಡಿಯಲ್ಲಿ ಅನುಮೋದಿಸಲಾದ ಕಂಪನಿಗಳು 35,000 ಯುಎಸ್‌ ಡಾಲರ್‌ ನಷ್ಟು  ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ನಾಲ್ಕು ಚಕ್ರಗಳ ಎಲೆಕ್ಟ್ರಿಕ್ ಬಿಲ್ಟ್ ಯೂನಿಟ್‌ಗಳನ್ನು (CBUs) ಪ್ರತಿಶತ 15ರಷ್ಟು ಕಡಿಮೆ ಕಸ್ಟಮ್ಸ್ ಸುಂಕದಲ್ಲಿ ಆಮದು ಮಾಡಿಕೊಳ್ಳಬಹುದು, ಪ್ರಸ್ತುತ ಸುಮಾರು ಪ್ರತಿಶತ 70ರಷ್ಟು ದರಕ್ಕೆ ಹೋಲಿಸಿದರೆ, ಈ ರಿಯಾಯಿತಿ ಆಮದು ಅನುಮೋದನೆಯ ದಿನಾಂಕದಿಂದ ಐದು ವರ್ಷಗಳವರೆಗೆ ಲಭ್ಯವಿರುತ್ತದೆ ಮತ್ತು ಬಳಕೆಯಾಗದ ಕೋಟಾಗಳನ್ನು ಮುಂದಕ್ಕೆ ಹಾಕಲು ನಿಬಂಧನೆಗಳೊಂದಿಗೆ ವಾರ್ಷಿಕವಾಗಿ 8,000 ವಾಹನಗಳಿಗೆ ಮಿತಿಗೊಳಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಅರ್ಹತೆ ಪಡೆಯಲು ಕಂಪನಿಗಳು ಮೂರು ವರ್ಷಗಳ ಒಳಗೆ ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು ಮತ್ತು ಅದೇ ಅವಧಿಯಲ್ಲಿ ಕನಿಷ್ಠ ಪ್ರತಿಶತ 25ರಷ್ಟು ದೇಶೀಯ ಮೌಲ್ಯವರ್ಧನೆ (DVA) ಸಾಧಿಸಬೇಕು. ಇದು ಐದು ವರ್ಷಗಳ ಒಳಗೆ ಕನಿಷ್ಠ 50 ಪ್ರತಿಶತಕ್ಕೆ ಏರಬೇಕು. ಆಟೋಮೊಬೈಲ್‌ ಯೋಜನೆಗಳಿಗೆ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆಯ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ ಅಡಿಯಲ್ಲಿ ಅನುಸಾರ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಸಚಿವಾಲಯವು ಅನುಮೋದಿಸಿದ ಪರೀಕ್ಷಾ ಏಜೆನ್ಸಿಗಳಿಂದ ಡಿವಿಎ ಪ್ರಮಾಣೀಕರಣವನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಸ್ಥಳೀಯ ಮಟ್ಟದಲ್ಲಿ ಉತ್ಪಾದನೆ:

ಈ ನೀತಿಯನ್ನು ಹೂಡಿಕೆ ಆಕರ್ಷಿಸಲು ಮಾತ್ರವಲ್ಲದೆ, ಸ್ಥಳೀಯ ಮಟ್ಟದಲ್ಲಿ ಉತ್ಪಾದನೆಯನ್ನು ಉತ್ತೇಜಿಸುವುದಾಗಿದೆ. ಕಂಪನಿಗಳು ಸ್ಥಾವರ, ಯಂತ್ರೋಪಕರಣಗಳು, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಇತರ ಸಂಬಂಧಿತ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಭೂಮಿಯ ವೆಚ್ಚವನ್ನು ಹೂಡಿಕೆ ಲೆಕ್ಕಾಚಾರದಿಂದ ಹೊರಗಿಡಲಾಗಿದ್ದರೂ, ಕಾರ್ಖಾನೆ ಕಟ್ಟಡಗಳ ಮೇಲಿನ ವೆಚ್ಚಗಳನ್ನು ಪರಿಗಣಿಸಲಾಗುತ್ತದೆ. ಅವು ಬದ್ಧ ಹೂಡಿಕೆಯ ಶೇ.10ಕ್ಕಿಂತ ಹೆಚ್ಚಿಲ್ಲದಿದ್ದರೆ. ಹೆಚ್ಚುವರಿಯಾಗಿ, ಹೂಡಿಕೆಯ ಶೇ. 5 ರವರೆಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಸಬಹುದು ಎಂದು ಅವರು ಹೇಳಿದರು.

“ಮುನ್ನೆಚ್ಚರಿಕೆಯಾಗಿ, ಕಂಪನಿಗಳು ₹4,150 ಕೋಟಿಗಿಂತ ಹೆಚ್ಚಿನ ಮೊತ್ತ ಅಥವಾ ಯೋಜನೆಯ ಅವಧಿಯಲ್ಲಿ ಅವುಗಳಿಗೆ ವಿನಾಯಿತಿ ನೀಡಲಾದ ಒಟ್ಟು ಕಸ್ಟಮ್ಸ್ ಸುಂಕಕ್ಕೆ ಸಮಾನವಾದ ಬ್ಯಾಂಕ್ ಗ್ಯಾರಂಟಿಯನ್ನು ಒದಗಿಸಬೇಕು. ಈ ಗ್ಯಾರಂಟಿಯು ಯೋಜನೆಯ ಅವಧಿಯಾದ್ಯಂತ ಮಾನ್ಯವಾಗಿರಬೇಕು ಮತ್ತು ಹೂಡಿಕೆ ಮತ್ತು ಸ್ಥಳೀಕರಣ ಗುರಿಗಳ ಅನುಸರಣೆಯ ಆರ್ಥಿಕ ಭರವಸೆಯಾಗಿ ಕಾರ್ಯನಿರ್ವಹಿಸುತ್ತದೆ.  ಎಂದು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಯೋಜನೆಗೆ ಅರ್ಜಿ ಸಲ್ಲಿಸುವ ಪೋರ್ಟಲ್‌ ಅನ್ನು ಶೀಘ್ರವೇ ತೆರೆಯಲಾಗುವುದು. ಆರಂಭದಲ್ಲಿ 120 ದಿನಗಳವರೆಗೆ ಅದು ತೆರೆದಿರುತ್ತದೆ. ಭವಿಷ್ಯದಲ್ಲಿ ಅಗತ್ಯವಿರುವಂತೆ ಸಚಿವಾಲಯವು ಅದನ್ನು ಪುನಾ ತೆರೆಯಬಹುದು. ಈ ಯೋಜನೆಯು ಮಾರ್ಚ್ 15, 2026 ರವರೆಗೆ ಅರ್ಜಿಗಳನ್ನು ಸ್ವೀಕರಿಸುತ್ತದೆ. ಕಂಪನಿಗಳು ₹5 ಲಕ್ಷ ಮರು ಪಾವತಿಸಲಾಗದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಹತೆ ಪಡೆಯಲು, ಅರ್ಜಿದಾರರು ಕನಿಷ್ಠ ₹10,000 ಕೋಟಿ ವಾರ್ಷಿಕ ಆದಾಯ ಮತ್ತು ₹3,000 ಕೋಟಿ ಕನಿಷ್ಠ ಜಾಗತಿಕ ಸ್ಥಿರ ಆಸ್ತಿ ಮೂಲವನ್ನು ಹೊಂದಿರುವ ಜಾಗತಿಕ ವಾಹನ ಉತ್ಪಾದನಾ ಸಮೂಹಗಳಾಗಿರಬೇಕು ಎಂದು ಅವರು ಹೇಳಿದರು.

ಈ ಯೋಜನೆಯು ಭಾರತದ ಆಟೋಮೋಟಿವ್ ವಲಯಕ್ಕೆ ಒಂದು ದಿಕ್ಕನ್ನೇ ಬದಲಾಯಿಸುವಂತಿದೆ. ವಿಶೇಷವಾಗಿ ಇದು ಇಂಗಾಲ ಹೊರಸೂಸುವಿಕೆ ತಡೆಯುವುದು ಮತ್ತು ವಿದ್ಯುತ್ ಚಲನಶೀಲತೆಯ ಕಡೆಗೆ ಜಾಗತಿಕ ಪ್ರವೃತ್ತಿಗಳಿಗೆ ಹೊಂದಿಕೆಯಾಗುವುದರಿಂದ ಬಲವಾದ ಪ್ರೋತ್ಸಾಹ, ಕಟ್ಟುನಿಟ್ಟಾದ ಸ್ಥಳೀಕರಣ ಮಾನದಂಡಗಳು ಮತ್ತು ಮೇಕ್ ಇನ್ ಇಂಡಿಯಾಗೆ ಸ್ಪಷ್ಟ ಬದ್ಧತೆಯೊಂದಿಗೆ, ಈ ಯೋಜನೆಯನ್ನು ಜಗತ್ತಿನ ಕೆಲ ಉನ್ನತ ವಿದ್ಯುತ್ ತಯಾರಕರು ದೇಶದಲ್ಲಿ ಘಟಕಗಳನ್ನು ಸ್ಥಾಪಿಸಲು ಒಂದು ಕಾರ್ಯತಂತ್ರದ ಆಹ್ವಾನವೆಂದು ಪರಿಗಣಿಸಲಾಗಿದೆ ಎಂದು ಸಚಿವರು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಬೃಹತ್‌ ಕೈಗಾರಿಕೆ ಸಚಿವಲಾಯದ ಕಾರ್ಯದರ್ಶಿ ಕಮರನ್‌ ರಿಜ್ವಿ, ಹೆಚ್ಚುವರಿ ಕಾರ್ಯದರ್ಶಿ ಹನೀಫ್‌ ಖುರೇಶಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments