ಯಡ್ರಾಮಿ ಪಟ್ಟಣದಲ್ಲಿ ತಡ ರಾತ್ರಿ ಸುಮಾರು 02:30 ಗಂಟೆಗೆ ಗೋಡೆ ಕುಸಿದು ಬಾಲಕಿ ಸಾನಿಯಾ (17) ಮೃತಪಟ್ಟಿರುವ ಘಟನೆ ನಡೆದಿದೆ.
ಯಡ್ರಾಮಿ ಪಟ್ಟಣದ ನಿವಾಸಿ, ಸೈಪನಸಾಬ ತಾಂಬೋಳಿ, ಹಾಗೂ ಪತ್ನಿ ಸಿಂದಗಿಗೆ ಹೋಗಿದ್ದರು, ಮನೆಯಲ್ಲಿ 5 ಮಕ್ಕಳು ಇದ್ದು, ನಿದ್ದೆಯಲ್ಲಿದ್ದಾಗ ಮದ್ಯರಾತ್ರಿ ಗೋಡೆ ಕುಸಿದ್ದು, ಬಾಲಕಿ ಮೇಲೆ ಸಂಪೂರ್ಣ ಗೋಡೆ ಬಿದ್ದು ಮೃತ ಪಟ್ಟಿರುವ ಘಟನೆ ಸಂಭವಿಸಿದೆ.
ಗೋಡೆ ಕುಸಿತ ಸದ್ದಿಗೆ ಅಕ್ಕ-ಪಕ್ಕದ ನಿವಾಸಿಗಳು ದೌಡಾಸಿ ಬಂದು ನೋಡುವ ಅಷ್ಟರಲ್ಲಿ 4ಮಕ್ಕಳಿಗೆ ಗಂಬಿರ ಗಾಯ ಗೊಂಡಿದ್ದು, ಅಕ್ಕಾ- ಅಕ್ಕಾ ಎಂದು ಅಳುತ್ತಿದ್ದು, ಸ್ಥಳೀಯರು ಕುಸಿತ ಗೋಡೆಯ ಕಲ್ಲುಗಳು ಪಕ್ಕಕ್ಕೆ ಎಸೆದು ಹುಡುಕಾಟ ನಡೆಸಿವೇ, ಬಾಲಕಿ ಮೇಲೆ ಸಂಪೂರ್ಣ ಗೋಡೆ ಬಿದ್ದಿದರಿಂದ ಬಾಲಕಿ ಬದುಕುಳಿಯಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನುಳಿದ 4 ಜನ ಮಹಿಬೂಬ, ನಿಶಾದ, ಆಯಿಷಾ, ರಮಜಾನಬಿ ಗಂಭೀರ ಗಾಯಗೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.



