ಎಕ್ಸ್ (ಟ್ವಿಟರ್) ಮತ್ತು ಟಿಕ್ ಟಾಕ್ ನಿಷೇಧಿಸಿದ್ದ ಪಾಕಿಸ್ತಾನ ಸೇನೆ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ ಬುಕ್ ಮತ್ತು ಯೂಟ್ಯೂಬ್ ಗಳನ್ನು ನಿಷೇಧಿಸಲು ಮುಂದಾಗಿದೆ.
4 ತಿಂಗಳ ಕಾಲ ಎಕ್ಸ್ ನಿಷೇಧಿಸಿದ್ದ ಪಾಕಿಸ್ತಾನ ಸೇನೆ ಇದೀಗ ಎಲ್ಲಾ ಸಾಮಾಜಿಕ ಜಾಲತಾಣವನ್ನು ಜುಲೈ 13ರಿಂದ 18ರವರೆಗೆ ನಿಷಧಿಸಲು ಮುಂದಾಗಿದೆ.
ರಮ್ಜಾನ್ ಪ್ರಯುಕ್ತ ದ್ವೇಷ ಪ್ರಸಾರ ಮಾಡುವ ಫೇಸ್ ಬುಕ್, ವಾಟ್ಸಪ್, ಇನ್ ಸ್ಟಾಗ್ರಾಂ, ಟಿಕ್ ಟಾಕ್ ಗಳನ್ನು 6 ದಿನಗಳ ಕಾಲ ನಿಷೇಧಿಸಲು ಪಾಕಿಸ್ತಾನ ಸೇನೆ ನಿರ್ಧರಿಸಿದೆ.
ನಮಾಜ್ ಸಂಪುಟ ಸಚಿವ ಮರಿಯಮ್ ನವಾಜ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಜುಲೈ 13ರಿಂದ 18ರವರೆಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 11 ಗಂಟೆಯವರೆಗೆ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ರಮ್ಜಾನ್ ಸೌಹಾರ್ದತೆಯ ಪವಿತ್ರ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಸುಳ್ಳು ಅಥವಾ ತಪ್ಪು ಮಾಹಿತಿ, ದ್ವೇಷದ ಸಂದೇಶಗಳು ರವಾನೆ ಆಗದಂತೆ ತಡೆಯಲು ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.