Saturday, June 13, 2026
Google search engine
Homeಕ್ರೀಡೆಬೆಂಗಳೂರಿನಲ್ಲಿ ಇಂದಿನಿಂದ ಕ್ಲಾಸಿಕ್ 2025 ಟೂರ್ನಿ: ನೀರಜ್ ಚೋಪ್ರಾ ಪ್ರಮುಖ ಆಕರ್ಷಣೆ

ಬೆಂಗಳೂರಿನಲ್ಲಿ ಇಂದಿನಿಂದ ಕ್ಲಾಸಿಕ್ 2025 ಟೂರ್ನಿ: ನೀರಜ್ ಚೋಪ್ರಾ ಪ್ರಮುಖ ಆಕರ್ಷಣೆ

ಬೆಂಗಳೂರು: ದೇಶದ ಮೊದಲ ಜಾವೆಲಿನ್-ಮಾತ್ರ ಅಥ್ಲೆಟಿಕ್ಸ್ ಮೀಟ್ ನೀರಜ್ ಚೋಪ್ರಾ ಕ್ಲಾಸಿಕ್ 2025 ಕೂಟಕ್ಕೆ ಉದ್ಯಾನನಗರಿ ಗರಿಗೆದರಿ ನಿಂತಿದೆ.

ಶನಿವಾರ (ಜು. 5ರಂದು) ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ನೊಂದಿಗೆ ಭಾರತವು ಜಾವೆಲಿನ್ ಇತಿಹಾಸವನ್ನು ರಚಿಸಲು ಸಜ್ಜಾಗಿದೆ.

ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಗೋಲ್ಡ್ ಈವೆಂಟ್ನಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಸೇರಿದಂತೆ 12 ವಿಶ್ವ ದಜರ್ೆಯ ಜಾವೆಲಿನ್ ಎಸೆತಗಾರರು ಉನ್ನತ ಗೌರವಗಳಿಗಾಗಿ ಸ್ಪಧರ್ಿಸಲಿದ್ದಾರೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಉದಯೋನ್ಮುಖ ಜಾಗತಿಕ ತಾರೆಗಳಾದ ಕಟರ್ಿಸ್ ಥಾಂಪ್ಸನ್ (ಯುಎಸ್ಎ), ಲೂಯಿಜ್ ಮಾರಿಸಿಯೊ ಡಾ ಸಿಲ್ವಾ (ಬ್ರೆಜಿಲ್), ರುಮೇಶ್ ಪಥಿರೇಜ್ (ಶ್ರೀಲಂಕಾ), ಸಚಿನ್ ಯಾದವ್, ರೋಹಿತ್ ಯಾದವ್, ಸಾಹಿಲ್ ಸಿಲ್ವಾಲ್ ಮತ್ತು ಯಶ್ವೀರ್ ಸಿಂಗ್ ಸ್ಪಧರ್ೆಯ ಭಾಗವಾಗಿದ್ದಾರೆ.

ಗಾಯದ ಕಾರಣದಿಂದ ಆಂಡರ್ಸನ್ ಪೀಟಸರ್್ ಮತ್ತು ಕಿಶೋರ್ ಜೆನಾ ಅವರ ಅನುಪಸ್ಥಿತಿಯಿದ್ದರೂ, 12 ಸ್ಪಧರ್ಿಗಳಲ್ಲಿ ಆರು ಮಂದಿ ಈ ಋತುವಿನ ಅತ್ಯುತ್ತಮ 85 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಸಾಧನೆ ಹೊಂದಿದ್ದಾರೆ. ಈ ಋತುವಿನ ಆರಂಭದಲ್ಲಿ 90 ಮೀಟರ್ ತಡೆಗೋಡೆಯನ್ನು ಮುರಿದ ನೀರಜ್ ಚೋಪ್ರಾ ತವರು ಪ್ರೇಕ್ಷಕರ ಮುಂದೆ ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿದ್ದಾರೆ.

ಕಳೆದ ತಿಂಗಳು ಸತತ ಎರಡು ಪ್ರಶಸ್ತಿಗಳನ್ನು ಗೆದ್ದಿರುವ ಅವರು 90.23 ಮೀಟರ್ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದಾರೆ. ಮಾಜಿ ಒಲಿಂಪಿಕ್ ಚಾಂಪಿಯನ್ ಥಾಮಸ್ ರೋಹ್ಲರ್ ಕೂಡ ಸ್ಪಧರ್ೆಯ ಭಾಗವಾಗಿದ್ದಾರೆ, ಆದರೆ ಕಳೆದ ಆರು ವರ್ಷಗಳಿಂದ 81 ಮೀಟರ್ ಮೀರಿ ಎಸೆಯಲು ವಿಫಲರಾಗಿದ್ದಾರೆ.

ನೀರಜ್ ಚೋಪ್ರಾ ಕೋಟ್

“ನನಗೆ ಇದುಕನಸೆಂಬಂತೆ ಇದೆ. ಪದಕಗಳು ಬೇರೆಯೇ ವಿಷಯ. ಆದರೆ ನಾನು ಭಾರತ ಮತ್ತು ಭಾರತೀಯ ಕ್ರೀಡಾಪಟುಗಳಿಗೆ ಇಂತಹದ್ದೇನನ್ನೋ ನೀಡಿದ್ದೇನೆ. ಎನ್ನುವುದೇ ನನಗೆ ತುಂಬಾ ಸಂತೋಷದ ವಿಷಯವಾಗಿದೆ. ಇದು ನಮ್ಮ ಅಥ್ಲೆಟಿಕ್ಸ್ನಲ್ಲಿ ಹೊಸ ಅಧ್ಯಾಯದ ಪ್ರಾರಂಭ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments