Saturday, August 15, 2026
Google search engine
Homeದೇಶಪಾಕಿಸ್ತಾನ ಯುದ್ಧ 4 ದಿನದಲ್ಲೇ ಮುಗಿದು ಹೋಗುತ್ತದೆ: ವರದಿ

ಪಾಕಿಸ್ತಾನ ಯುದ್ಧ 4 ದಿನದಲ್ಲೇ ಮುಗಿದು ಹೋಗುತ್ತದೆ: ವರದಿ

ಶಸ್ತ್ರಾಸ್ತ್ರ ಸಂಗ್ರಹಗಳ ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ಒಂದು ವೇಳೆ ಯುದ್ಧ ಮಾಡಿದರೆ 4 ದಿನಗಳಲ್ಲಿ ಮುಗಿದು ಹೋಗುತ್ತದೆ ಎಂದು ವರದಿಗಳು ಹೇಳಿವೆ.

ಪಾಕಿಸ್ತಾನದ ಬಳಿ ಶಸ್ತ್ರಾಸ್ತ್ರಗಳ ಸಂಗ್ರಹ 4 ದಿನಗಳ ಯುದ್ಧಕ್ಕೆ ಆಗುವಷ್ಟು ಮಾತ್ರ ಇದೆ. ಅಲ್ಲದೇ ಯುದ್ಧ ವಿಮಾನಗಳ ಕೊರತೆ ಕೂಡ ಸಾಕಷ್ಟು ಇದೆ ಎಂದು ಹೇಳಲಾಗಿದೆ.

ಪಾಕಿಸ್ತಾನಕ್ಕೆ ಉಕ್ರೇನ್ ಮತ್ತು ಇಸ್ರೇಲ್ ನಿಂದ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪೂರೈಕೆ ಆಗುತ್ತಿದ್ದವು. ಆದರೆ ಈ ಎರಡೂ ದೇಶಗಳು ಯುದ್ಧ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಪೂರೈಸುವವರು ಇಲ್ಲದಂತಾಗಿದೆ.

ಇದೇ ವೇಳೆ ಬಲೂಚಿಸ್ತಾನ ಉಗ್ರರ ಹಾವಳಿ ಹಾಗೂ ರೈಲು ಹೈಜಾಕ್ ಪ್ರಕರಣ ಮುಂತಾದವುಗಳಿಂದ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ಕೊರತೆ ಎದುರಿಸುತ್ತಿದೆ. ಇದರಿಂದ ಯುದ್ಧ ನಡೆದರೆ 96 ಗಂಟೆಯಲ್ಲೇ ಶಸ್ತ್ರಾಸ್ತ್ರಗಳು ಮುಗಿದು ಹೋಗಲಿವೆ.

ಎಂ109 ಹೌರ್ಥೆಸ್ ಬಾಂಬರ್ ಗಳಿಗೆ ಬಳಸುವ 155ಎಂ ಶೆಲ್ ಹಾಗೂ ಬಿಎಂ21 ನಲ್ಲಿ ಬಳಸುವ 122 ಎಂ ಶೆಲ್ ಗಳ ಕೊರತೆ ಪಾಕಿಸ್ತಾನವನ್ನು ಕಾಡುತ್ತಿದೆ. 155ಎಂ ಶೆಲ್ ಗಳನ್ನು ಉಕ್ರೇನ್ ಕಳುಹಿಸಿಕೊಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments