Wednesday, October 7, 2026
Google search engine
Homeದೇಶನಡೆಯದ 19 ದಿನದ ಸಂಸತ್ ಅಧಿವೇಶನಕ್ಕೆ ತೆರೆ: ಚರ್ಚೆ ಇಲ್ಲದೇ 11 ಮಸೂದೆಗೆ ಅಂಗೀಕಾರ

ನಡೆಯದ 19 ದಿನದ ಸಂಸತ್ ಅಧಿವೇಶನಕ್ಕೆ ತೆರೆ: ಚರ್ಚೆ ಇಲ್ಲದೇ 11 ಮಸೂದೆಗೆ ಅಂಗೀಕಾರ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವು ಗುರುವಾರ  ಅಂತ್ಯಗೊಂಡಿದ್ದು, ಲೋಕಸಭೆ ಮತ್ತು ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಮುಂಗಾರು ಅಧಿವೇಶನದಲ್ಲಿ ಮಂಡಿಸಲಾದ 12 ಮಸೂದೆಗಳಲ್ಲಿ 11 ಮಸೂದೆಗಳಿಗೆ ಎರಡೂ ಸದನಗಳ ಅನುಮೋದನೆ ದೊರೆತಿದೆ. ಭಾರತೀಯ ಸಾಂಖ್ಯಿಕ ಸಂಸ್ಥೆ ಮಸೂದೆ, 2026 ಮಾತ್ರ ಬಾಕಿ ಉಳಿದಿದೆ.

ಗಣಿಗಾರಿಕೆ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2026ಕ್ಕೆ ರಾಜ್ಯಸಭೆ ಗುರುವಾರ ಅಂಗೀಕಾರ ನೀಡಿತು. ಮಾಹಿತಿ ಪ್ರಕಾರ, ಮುಂಗಾರು ಅಧಿವೇಶನದಲ್ಲಿ ಮಂಡಿಸಲಾದ 12 ಮಸೂದೆಗಳ ಪೈಕಿ ಯಾವುದನ್ನೂ ಸ್ಥಾಯಿ ಸಮಿತಿಗಳಿಗೆ ಕಳುಹಿಸಲಾಗಿಲ್ಲ. ಈ ಮಸೂದೆಗಳನ್ನು ಜುಲೈ 20 ರಿಂದ ಆಗಸ್ಟ್ 10ರ ನಡುವೆ ಮಂಡಿಸಲಾಗಿತ್ತು.

ಚರ್ಚೆಯಿಲ್ಲದೇ ಅಂಗೀಕಾರ:

ಅಂಕಿ-ಅಂಶಗಳ ಪ್ರಕಾರ, ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ, 2026ಕ್ಕೆ ಎರಡೂ ಸದನಗಳಲ್ಲಿ ಅತ್ಯಧಿಕ ಚರ್ಚೆ ನಡೆದಿದೆ. ಈ ಮಸೂದೆ ಕುರಿತು ಒಟ್ಟು 17 ಗಂಟೆ 34 ನಿಮಿಷ ಚರ್ಚೆ ನಡೆದಿದೆ. ಉಳಿದ 10 ಮಸೂದೆಗಳ ಕುರಿತು ಒಟ್ಟಾರೆ 15 ಗಂಟೆ 24 ನಿಮಿಷ ಚರ್ಚೆ ನಡೆದಿದೆ ಮಸೂದೆಗಳ ಅಂಗೀಕಾರ ಪ್ರಕ್ರಿಯೆಗೆ ಒಟ್ಟು 32 ಗಂಟೆ 58 ನಿಮಿಷ, ಅಂದರೆ ಸುಮಾರು 33 ಗಂಟೆ ಸಮಯ ವ್ಯಯವಾಗಿದೆ.

5 ನಿಮಿಷಕ್ಕಿಂತ ಕಡಿಮೆ ಚರ್ಚೆ:

ಅಧಿವೇಶನದಲ್ಲಿ ಮಂಡಿಸಲಾದ ಮಸೂದೆಗಳ ಪೈಕಿ 7 ಮಸೂದೆಗಳ ಕುರಿತು ಲೋಕಸಭೆಯಲ್ಲಿ 5 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಚರ್ಚೆ ನಡೆದಿದೆ.

ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ ಹಾಗೂ ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆಗೆ ತಲಾ 4 ನಿಮಿಷ ಚರ್ಚೆ ನಡೆದಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ಮಸೂದೆ ಹಾಗೂ ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆಗೆ ತಲಾ 3 ನಿಮಿಷ ಚರ್ಚೆ ನಡೆದಿದೆ.

ಬ್ಯಾಂಕರ್‌ಗಳ ಪುಸ್ತಕಗಳ ಸಾಕ್ಷ್ಯ ಮಸೂದೆಗೆ 5 ನಿಮಿಷ, ಕೇರಳ (ಹೆಸರು ಬದಲಾವಣೆ) ಮಸೂದೆಗೆ ನಾಲ್ಕು ನಿಮಿಷ ಹಾಗೂ ಗಣಿಗಾರಿಕೆ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆಗೆ 5 ನಿಮಿಷ ಚರ್ಚೆ ನಡೆದಿದೆ. ಈ ಏಳು ಮಸೂದೆಗಳ ಕುರಿತು ಲೋಕಸಭೆಯಲ್ಲಿ ಒಟ್ಟಾರೆ ನಡೆದ ಚರ್ಚೆಯ ಅವಧಿ ಕೇವಲ 28 ನಿಮಿಷ ಎಂದು ಅಂಕಿಅಂಶಗಳು ತಿಳಿಸಿವೆ.

ಅಧಿವೇಶನಕ್ಕೆ ಹೋಲಿಕೆ ಹೇಗೆ?

2026ರ ಮುಂಗಾರು ಅಧಿವೇಶನದಲ್ಲಿ 12 ಮಸೂದೆಗಳು ಮಂಡನೆಯಾಗಿ, 11 ಮಸೂದೆಗಳು ಅಂಗೀಕಾರಗೊಂಡಿವೆ. 12 ಮಸೂದೆಗಳ ಪೈಕಿ ಭಾರತೀಯ ಸಾಂಖ್ಯಿಕ ಸಂಸ್ಥೆ ಮಸೂದೆ, 2026 ಮಾತ್ರ ಬಾಕಿ ಉಳಿದಿದೆ. ಇದಕ್ಕೆ ಹೋಲಿಸಿದರೆ, 2025ರ ಮುಂಗಾರು ಅಧಿವೇಶನದಲ್ಲಿ 13 ಮಸೂದೆಗಳು ಮಂಡನೆಯಾಗಿದ್ದು, 8 ಮಸೂದೆಗಳು ಅದೇ ಅಧಿವೇಶನದಲ್ಲಿ ಅಂಗೀಕಾರಗೊಂಡಿದ್ದವು.

2025ರಲ್ಲಿ ಮಂಡಿಸಲಾದ 13 ಮಸೂದೆಗಳ ಪೈಕಿ 5 ಮಸೂದೆಗಳನ್ನು ಸಮಿತಿಗಳಿಗೆ ಕಳುಹಿಸಲಾಗಿತ್ತು. ಅವುಗಳಲ್ಲಿ 3 ಜಂಟಿ ಸಂಸದೀಯ ಸಮಿತಿಗಳಿಗೆ ಹಾಗೂ ಎರಡು ಲೋಕಸಭೆಯ ಆಯ್ಕೆ ಸಮಿತಿಗಳಿಗೆ ಕಳುಹಿಸಲಾಗಿತ್ತು. ಆದರೆ 2026ರಲ್ಲಿ ಮಂಡನೆಯಾದ ಯಾವುದೇ ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಲಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments