Wednesday, May 20, 2026
Google search engine
Homeದೇಶಭಾರತದ 10 ಪ್ರಮುಖ ಘೋರ ವಿಮಾನ ದುರಂತಗಳು! 1996 ನಂತರ ಅತೀ ದೊಡ್ಡ ದುರಂತವಿದು!

ಭಾರತದ 10 ಪ್ರಮುಖ ಘೋರ ವಿಮಾನ ದುರಂತಗಳು! 1996 ನಂತರ ಅತೀ ದೊಡ್ಡ ದುರಂತವಿದು!

ನವದೆಹಲಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಗುರುವಾರ ಸಂಭವಿಸಿದ ಭೀಕರ ವಿಮಾನ ದುರಂತ ದೇಶದ 2ನೇ ಅತೀ ದೊಡ್ಡ ದುರಂತ ಎಂದು ವಿಶ್ಲೇಷಿಸಲಾಗುತ್ತಿದ್ದು, ಇದಕ್ಕೂ ಮುನ್ನ ತಲ್ಲಣಗೊಳಿಸಿದ 10 ಪ್ರಮುಖ ವಿಮಾನಗಳ ದುರಂತಗಳ ವಿವರ ಹೀಗಿದೆ.

1996 ರ ನವೆಂಬರ್ 12 ರಂದು 349 ಜನರನ್ನು ಬಲಿತೆಗೆದುಕೊಂಡ 1996 ರ ಚರ್ಖಿ ದಾದ್ರಿ ವಿಮಾನದ ಮಧ್ಯ-ಗಾಳಿಯ ಡಿಕ್ಕಿಯು ದೇಶದ ಅತ್ಯಂತ ಭೀಕರ ವಾಯು ದುರಂತವಾಗಿ ಉಳಿದಿದೆ. ಇದಾದ ನಂತರ ಭಾರತದಲ್ಲಿ ಸಂಭವಿಸಿದ ಎರಡನೇ ಅತೀ ದೊಡ್ಡ ವಿಮಾನ ದುರಂತ ಎಂದು ವಿಶ್ಲೇಷಿಸಲಾಗುತ್ತಿದೆ.

2020ರಲ್ಲಿ ಕೇರಳದ ಕೋಝಿಕೋಡ್ ನಲ್ಲಿ ಸಂಭವಿಸಿದ ದುರಂತದ ನಂತರ ಅಂದರೆ 5 ವರ್ಷಗಳ ನಂತರ ದೇಶದಲ್ಲಿ ಸಂಭವಿಸಿದ ವಿಮಾನ ದುರಂತವಾಗಿದೆ.

ಕೋಝಿಕೋಡ್ ದುರಂತ

ಆಗಸ್ಟ್ 7, 2020ರಲ್ಲಿ ಕ್ಯಾಲಿಕಟ್ (ಕೋಝಿಕೋಡ್) ವಾಯು ಅಪಘಾತ: ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 1344 ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡು 21 ಮಂದಿ ಮೃತಪಟ್ಟಿದ್ದರು. ತೇವಗೊಂಡಿದ್ದ ರನ್‌ವೇಯಲ್ಲಿ ಜಾರಿದ ವಿಮಾನ 2 ಭಾಗಗಳಾಗಿ ತುಂಡಾಗಿತ್ತು.

ಮಂಗಳೂರು ದುರಂತ

ಮೇ 22, 2010ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 812 ಮಂಗಳೂರಿನಲ್ಲಿ ರನ್‌ವೇಯಿಂದ ಹೊರಗೆ ಕಂದಕಕ್ಕೆ ಜಾರಿ ಬಿದ್ದು 158 ಮಂದಿ ಮೃತಪಟ್ಟಿದ್ದರು.

ಪಾಟ್ನಾ ದುರಂತ

ಜುಲೈ 17, 2000ರಂದು ಅಲೈಯನ್ಸ್ ಏರ್ ಫ್ಲೈಟ್ 7412 ರ ಬೋಯಿಂಗ್ 737 ವಿಮಾನ ಪೈಲೆಟ್ ದೋಷದಿಂದಾಗಿ ಪಾಟ್ನಾದಲ್ಲಿ ಇಳಿಯುವಾಗ ಪತನಗೊಂಡು 60 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಚಾರ್ಖಿ ದಾದ್ರಿ ಮಿಡ್ ಏರ್ ಅಪಘಾತ

ನವೆಂಬರ್ 12, 1996ರಲ್ಲಿ ಸೌದಿ ಅರೇಬಿಯನ್ ಏರ್ ಲೈನ್ಸ್ ಬೋಯಿಂಗ್ 747 ಮತ್ತು ಕಝಾಕಿಸ್ತಾನ್ ಏರ್ಲೈನ್ಸ್ ಇಲ್ಯುಶಿನ್ ಇಲ್-76 ದೆಹಲಿ ಬಳಿ ಆಕಾಶದಲ್ಲಿ ಪರಸ್ಪರ ಡಿಕ್ಕಿ ಹೊಡೆದು ಎರಡೂ ವಿಮಾನಗಳಲ್ಲಿದ್ದ ಎಲ್ಲಾ 349 ಜನರು ಸಾವಿಗೀಡಾಗಿದ್ದರು. ಪೈಲಟ್ ದೋಷ ಮತ್ತು ವಾಯು ಸಂಚಾರ ನಿಯಂತ್ರಣದೊಂದಿಗೆ ಸಂವಹನದ ಕೊರತೆಯೇ ಕಾರಣ ಎಂದು ನಂತರ ತಿಳಿಯಿತು.

ಔರಂಗಾಬಾದ್ ವಿಮಾನ ಅಪಘಾತ

ಏಪ್ರಿಲ್ 26, 1993, ಇಂಡಿಯನ್ ಏರ್ ಲೈನ್ಸ್ ಫ್ಲೈಟ್ 491, ಬೋಯಿಂಗ್ 737, ಔರಂಗಾಬಾದ್ ನಿಂದ ಟೇಕ್ ಆಫ್ ಆದ ನಂತರ ಅಪಘಾತಕ್ಕೀಡಾಗಿ, ಟ್ರಕ್ ಮತ್ತು ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆದು 55 ಮೃತಪಟ್ಟಿದ್ದರು.

ಇಂಫಾಲ್ ದುರಂತ

ಆಗಸ್ಟ್ 16, 1991ರಂದು ಇಂಡಿಯನ್ ಏರ್ ಲೈನ್ಸ್ ಫ್ಲೈಟ್ 257 ಇಂಫಾಲ್ ಬಳಿ ಪತನಗೊಂಡು, ವಿಮಾನದಲ್ಲಿದ್ದ ಎಲ್ಲಾ 69 ಜನರ ಸಾವಿಗೀಡಾಗಿದ್ದರು.

ಬೆಂಗಳೂರು ವಿಮಾನ ಅಪಘಾತ

ಫೆಬ್ರವರಿ 14, 1990ರಂದು ಇಂಡಿಯನ್ ಏರ್ ಲೈನ್ಸ್ ವಿಮಾನ 605, ಏರ್ ಬಸ್ A320, ಬೆಂಗಳೂರಿಗೆ ಸಮೀಪಿಸುತ್ತಿದ್ದಾಗ ಅಪಘಾತಕ್ಕೀಡಾಗಿ 92 ಜನರು ಸಾವನ್ನಪ್ಪಿದರು.

ಅಹಮದಾಬಾದ್ ವಿಮಾನ ಅಪಘಾತ

ಅಕ್ಟೋಬರ್ 19, 1988 ಇಂಡಿಯನ್ ಏರ್ಲೈನ್ಸ್ ವಿಮಾನ 113 ಅಹಮದಾಬಾದ್ನಲ್ಲಿ ಅಪಘಾತಕ್ಕೀಡಾಗಿ 133 ಜನರು ಸಾವನ್ನಪ್ಪಿದರು.

ಬಾಂಬೆ ಏರ್ ಅಪಘಾತ

ಜೂನ್ 21, 1982, ಬಾಂಬೆ ಏರ್ ಅಪಘಾತ: ಏರ್ ಇಂಡಿಯಾ ವಿಮಾನ 403 ಬಾಂಬೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ 17 ಜನರು ಸಾವನ್ನಪ್ಪಿದರು.

ಜನವರಿ 1, 1978, ಬಾಂಬೆ ಏರ್ ಅಪಘಾತ: ಏರ್ ಇಂಡಿಯಾ ವಿಮಾನ 855 ರ ಬೋಯಿಂಗ್ 747 ಮುಂಬೈನಿಂದ ಟೇಕ್ ಆಫ್ ಆದ ನಂತರ ಅರೇಬಿಯನ್ ಸಮುದ್ರಕ್ಕೆ ಅಪ್ಪಳಿಸಿತು, ವಿಮಾನದಲ್ಲಿದ್ದ ಎಲ್ಲಾ 213 ಜನರು ಸಾವನ್ನಪ್ಪಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments