ಇಂದು ಜೀ ಕನ್ನಡ ವಾಹಿನಿಯು ಇನ್‌ಸ್ಟಾಗ್ರಾಮ್‌ನಲ್ಲಿ 10 ಮಿಲಿಯನ್ (1 ಕೋಟಿ) ಫಾಲೋವರ್ಸ್ ಹೊಂದುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಕರ್ನಾಟಕದ ನಂ.1 ಎಂಟರ್‌ಟೈನ್‌ಮೆಂಟ್ ಚಾನೆಲ್ ಎಂಬ ಹೆಗ್ಗಳಿಕೆಯ ಜೊತೆಗೆ, ಇನ್‌ಸ್ಟಾಗ್ರಾಮ್‌ನಲ್ಲಿ 10 ಮಿಲಿಯನ್ ಫಾಲೋವರ್ಸ್ ತಲುಪಿದ ಕರ್ನಾಟಕದ ಮೊದಲ ಹಾಗೂ ಭಾರತದ ಎರಡನೇ ಮನರಂಜನಾ ವಾಹಿನಿ ಎಂಬ ಅಭೂತಪೂರ್ವ ಕೀರ್ತಿಗೆ ಭಾಜನವಾಗಿದೆ.
ಈ ಐತಿಹಾಸಿಕ ಯಶಸ್ಸು ಕೇವಲ ನಮ್ಮ ವಾಹಿನಿಯದ್ದಲ್ಲ, ಇದು ನಮ್ಮನ್ನು ನಿರಂತರವಾಗಿ ಪ್ರೀತಿಸಿ, ಹರಸುತ್ತಿರುವ ಕೋಟ್ಯಂತರ ಕನ್ನಡಿಗರದ್ದು. ನಿಮ್ಮ ಈ ಅಪಾರವಾದ ಪ್ರೀತಿ, ಬೆಂಬಲ ಮತ್ತು ನಂಬಿಕೆಯೇ ನಮಗೆ ಶ್ರೀರಕ್ಷೆ.
ನಮ್ಮ ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡಿ, ಈ ಮೈಲಿಗಲ್ಲನ್ನು ಸಾಧಿಸಲು ಶಕ್ತಿಯಾದ ಪ್ರತಿಯೊಬ್ಬ ಕನ್ನಡಿಗರಿಗೂ ಜೀ ವಾಹಿನಿಯು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದೆ. ನಿಮ್ಮ ನೆಚ್ಚಿನ ವಾಹಿನಿಯಾಗಿ ನಿಮ್ಮನ್ನು ರಂಜಿಸಲು ಜೀ ವಾಹಿನಿಯು ಸದಾ ಬದ್ಧವಾಗಿರುತ್ತದೆ.



