Wednesday, May 13, 2026
Google search engine
Homeಕ್ರೀಡೆಆರ್‌ ಸಿಬಿ ಖರೀದಿಗೆ ಪೈ ಗ್ರೂಪ್ಸ್‌- ಸ್ವೀಡನ್‌ ನಡುವೆ ನೇರ ಪೈಪೋಟಿ

ಆರ್‌ ಸಿಬಿ ಖರೀದಿಗೆ ಪೈ ಗ್ರೂಪ್ಸ್‌- ಸ್ವೀಡನ್‌ ನಡುವೆ ನೇರ ಪೈಪೋಟಿ

ಐಪಿಎಲ್‌ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಖರೀದಿಗಾಗಿ ಬಹುತೇಕರು ಹಿಂದೆ ಸರಿದಿದ್ದು, ಇದೀಗ ಮಣಿಪಾಲ್‌ ಗ್ರೂಪ್‌ ನ ರಂಜನ್‌ ಪೈ ಮತ್ತು ಸ್ವೀಡನ್‌ ಪ್ರವೇಟ್‌ ಈಕ್ವಿಟಿ ಕಂಪನಿ ನೇರ ಹಣಾಹಣಿ ಉಂಟಾಗಿದೆ.

2018ನೇ ಸಾಲಿನ ಐಪಿಎಲ್‌ ಚಾಂಪಿಯನ್‌ ಆಗಿರುವ ಆರ್‌ ಸಿಬಿಗೆ ಅತೀ ದೊಡ್ಡ ಅಭಿಮಾನಿಗಳ ಬಳಗ ಹೊಂದಿದ್ದು, ಜಗತ್ತಿನ ಅತೀ ದೊಡ್ಡ ಫ್ಯಾನ್‌ ಫಾಲೋವರ್ಸ್‌ ಹೊಂದಿದ ತಂಡಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರ್‌ ಸಿಬಿ ಖರೀದಿ ಮೌಲ್ಯ ಹೆಚ್ಚಾಗಿದ್ದು, 2 ಶತಕೋಟಿ ಡಾಲರ್‌ ಗೂ ಅಧಿಕವಾಗಿದೆ.
ಆರ್‌ ಸಿಬಿ ಫ್ರಾಂಚೈಸಿ ಮಾರಾಟಕ್ಕೆ ಕಳೆದ ಒಂದೂವರೆ ವರ್ಷದಿಂದ ಪ್ರಯತ್ನಗಳು ನಡೆಯುತ್ತಿವೆ. ಆದರೆ ಯಾವುದೂ ಅಂತಿಮವಾಗಿರಲಿಲ್ಲ. ಇದೀಗ ಅಂತಿಮ ಘಟ್ಟ ತಲುಪಿದ್ದು, ಫ್ರಾಂಚೈಸಿ ಖರೀದಿಗೆ 2 ಸಂಸ್ಥೆಗಳ ನಡುವೆ ಪೈಪೋಟಿ ನಡೆದಿದೆ.

ಆರ್‌ ಸಿಬಿ ಖರೀದಿಗೆ ಆಧಾರ್‌ ಪೂನಾವಾಲಾ, ಅಮೆರಿಕ ಮೂಲದ ಕೋಲ್ಬರ್ಗ್‌ ಕ್ರಾವಿಸ್‌ ರಾಬರ್ಟ್‌ ಮತ್ತು ಸಿಂಗಾಪುರದ ಬಂಡವಾಳ ಹೂಡಿಕೆ ಸಂಸ್ಥೆ ಟಿಮಾಸೆಕ್ ಸೇರಿದಂತೆ ಇನ್ನಿತರ ಮೂರು ಕಂಪನಿಗಳು ಪ್ರಯತ್ನ ನಡೆಸಿದ್ದವು. ಆದರೆ ಕೊನೆಯ ಹಂತದಲ್ಲಿ ಈ ಕಂಪನಿಗಳು ಹಿಂದೆ ಸರಿದಿವೆ.

ಗ್ಲೇಸರ್ಸ್‌ ಸಂಸ್ಥೆ 1.8 ಶತಕೋಟಿ ಡಾಲರ್‌ ವರೆಗೂ ಬಿಡ್‌ ಸಲ್ಲಿಸಿತ್ತು. ಆದರೆ ಸ್ವೀಡನ್‌ ಸಂಸ್ಥೆ 2 ಶತಕೋಟಿ ಡಾಲರ್‌ ಗೆ ಬಿಡ್‌ ಸಲ್ಲಿಸಿ ಮೇಲುಗೈ ಸಾಧಿಸಿತು. ಇದರಿಂದ ಗ್ಲೇಸರ್ಸ್‌ ಸಂಸ್ಥೆ ಹಿಂದೆ ಸರಿಯಿತು. ಮಾರ್ಚ್‌ 31ರೊಳಗೆ ಆರ್‌ ಸಿಬಿ ಫ್ರಾಂಚೈಸಿ ಮಾರಾಟಕ್ಕೆ ಕೊನೆಯ ದಿನವಾಗಿದೆ. ಇಲ್ಲದಿದ್ದರೆ ಪ್ರಕ್ರಿಯೆ ಮುಂದಿನ ವರ್ಷಕ್ಕೆ ಹೋಗಲಿದೆ. ಐಪಿಎಲ್‌ ನಿಯಮದ ಪ್ರಕಾರ ಯಾವುದೇ ಫ್ರಾಂಚೈಸಿ ಮಾರಾಟ ಪ್ರಕ್ರಿಯೆ ಮುಗಿಯಬೇಕಾದರೆ ಮಾರ್ಚ್‌ 31 ಕೊನೆಯ ದಿನವಾಗಿದೆ.

ಇದೇ ವೇಳೆ ರಾಜಸ್ಥಾನ್‌ ರಾಯಲ್ಸ್‌ ತಂಡ ಕೂಡ ಮಾರಾಟ ಪ್ರಕ್ರಿಯೆ ನಡೆದಿದ್ದು, ಹಲವು ಕಂಪನಿಗಳು ಆಸಕ್ತಿ ತೋರಿವೆ. ಆದರೆ ಹೂಡಿಕೆದಾರರು ಷೇರು ಪಡೆಯಲು ಆಸಕ್ತಿ ತೋರಿದ್ದಾರೆ ಹೊರತು ಇಡೀ ಫ್ರಾಂಚೈಸಿ ಖರೀದಿಗೆ ಮುಂದಾಗಿಲ್ಲ. ರಾಜಸ್ಥಾನ್‌ ರಾಯಲ್ಸ್‌ 1.10ರಿಂದ 1.35 ಶತಕೋಟಿ ಡಾಲರ್‌ ಗೆ ಬೇಡಿಕೆ ಇಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments