ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ನಮ್ಮ (ಕಾಂಗ್ರೆಸ್) ಮೇಲೆ ಪ್ರೀತಿ ಇದೆ. ಆದರೆ ನಿಮ್ಮ (ಬಿಜೆಪಿ) ಜೊತೆ ಮದುವೆ ಆಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ನಸುನಕ್ಕಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಎನ್ ಸಿಪಿ ಮುಖಂಡ ಶರದ್ ಪವಾರ್ ಸೇರಿದಂತೆ ಹಲವರ ರಾಜ್ಯಸಭಾ ಸದಸ್ಯತ್ವ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಭಾಷಣದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಮಾತು ನಗೆಗಡಲಲ್ಲಿ ತೇಲಿಸಿತು.
ದೇವೇಗೌಡರ ಅವಧಿ ಮುಕ್ತಾಯಗೊಂಡರೆ, ಶರದ್ ಪವಾರ್ ರಾಜ್ಯಸಭಾ ಸದಸ್ಯರಾಗಿ ಮರಳಲಿದ್ದಾರೆ. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯರಾಗಿ ದೇವೇಗೌಡರ ಕಾರ್ಯವೈಖರಿ ಹಲವರಿಗೆ ಮಾದರಿ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು.
In a welcome shift from noisy protests and heated exchanges between the treasury and Opposition benches, the Rajya Sabha today rang with peals of laughter, thanks to a light-hearted remark by outgoing member and Congress president Mallikarjun Kharge.
Kharge, Leader of the… pic.twitter.com/dUfWBtDUv6
— NDTV (@ndtv) March 18, 2026
ದೇವೇಗೌಡರು ಪ್ರಧಾನಿಯಾಗಿ ಮಾತ್ರವಲ್ಲ, ಹಲವಾರು ಹುದ್ದೆಗಳನ್ನು ನಿಭಾಯಿಸಿದ ಹಿರಿಯರು. ನಾನು 54 ವರ್ಷಗಳಿಂದ ದೇವೇಗೌಡರನ್ನು ನೋಡಿಕೊಂಡು ಬಂದಿದ್ದೇನೆ. ಅವರ ಜೊತೆ ಕೆಲಸವನ್ನು ಮಾಡಿದ್ದೇನೆ. ಅವರು ನಮ್ಮ ಜೊತೆ ಸುತ್ತಾಡಿದ್ದಾರೆ. ಪ್ರೀತಿ ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರನ್ನು ಯಾಕೆ ಮದುವೆ ಆದರು ಎಂಬುದು ತಿಳಿಯುತ್ತಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಬೆಂಬಲದಿಂದ ದೇವೇಗೌಡರು ಒಂದು ವರ್ಷಕ್ಕೂ ಕಡಿಮೆ ಅವಧಿಯ ಕಾಲ ಪ್ರಧಾನಿ ಆಗಿದ್ದರು. 2018ರಲ್ಲಿ ಅವರು ನಮ್ಮ ಜೊತೆ ಸೇರಿ ವಿಧಾನಸಭಾ ಚುನಾವಣೆಯನ್ನೂ ಎದುರಿಸಿದ್ದರು. ನಮ್ಮ ಜೊತೆ ಸೇರಿ ಸರ್ಕಾರ ರಚನೆ ಆದಾಗ ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಕೂಡ ಆಗಿದ್ದರು. ಕಾಂಗ್ರೆಸ್ ನ ಕೆಲವು ಶಾಸಕರು ಬಂಡಾಯ ಎದ್ದು ಪಕ್ಷ ತೊರೆದಿದ್ದರಿಂದ ಸರ್ಕಾರ ಪತನಗೊಂಡಿತು. ಆ ನಂತರ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿ ಸರ್ಕಾರ ರಚನೆ ಮಾಡಿತು ಎಂದು ಖರ್ಗೆ ವಿವರಿಸಿದರು.
ಇದೇ ವೇಳೆ ಕಾಂಗ್ರೆಸ್ ಜೊತೆ ದೀರ್ಘ ಸಮಯದಿಂದ ಮೈತ್ರಿಯಲ್ಲಿರುವ ಡಿಎಂಕೆ ಹಾಗೂ ಎನ್ ಸಿಪಿ ಪಕ್ಷದ ಸದಸ್ಯರು ರಾಜ್ಯಸಭೆಗೆ ಪ್ರವೇಶಿಸುತ್ತಿರುವುದು ಸಂತಸದ ವಿಷಯ ಎಂದು ಖರ್ಗೆ ಹೇಳಿದರು.



