Friday, May 15, 2026
Google search engine
Homeಕ್ರೀಡೆಮುಂದಿನ ವರ್ಷದಿಂದ ಐಪಿಎಲ್ ಗೆ ಹೊಸ ತಂಡಗಳ ಸೇರ್ಪಡೆ: 94ಕ್ಕೆ ಪಂದ್ಯ ಏರಿಕೆ?

ಮುಂದಿನ ವರ್ಷದಿಂದ ಐಪಿಎಲ್ ಗೆ ಹೊಸ ತಂಡಗಳ ಸೇರ್ಪಡೆ: 94ಕ್ಕೆ ಪಂದ್ಯ ಏರಿಕೆ?

ಮುಂದಿನ ವರ್ಷದಿಂದ ಐಪಿಎಲ್ ಟಿ-20 ಟೂರ್ನಿಗೆ ಹೊಸ ತಂಡಗಳನ್ನು ಸೇರ್ಪಡೆ ಮಾಡಿ, ಪಂದ್ಯಗಳ ಸಂಖ್ಯೆ 94ಕ್ಕೆ ಏರಿಸಲು ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧಮಲ್ ಹೇಳಿದ್ದಾರೆ.

2022ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳ ಸೇರ್ಪಡೆಯಾದ ನಂತರ ಪಂದ್ಯಗಳ ಸಂಖ್ಯೆ 74ಕ್ಕೆ ಏರಿಸಲಾಗಿತ್ತು. ಇದೀಗ ಹೊಸ ತಂಡಗಳನ್ನು ಸೇರ್ಪಡೆ ಮಾಡಿ 10ಕ್ಕೇರಿಸುವ ಮೂಲಕ ಪಂದ್ಯಗಳ ಸಂಖ್ಯೆಯನ್ನು 94ಕ್ಕೆ ಏರಿಸಲು ಚಿಂತನೆ ನಡೆಸಿದೆ.

ಪಂದ್ಯ ಹಾಗೂ ತಂಡಗಳ ಸಂಖ್ಯೆ ಹೆಚ್ಚು ಮಾಡಿದರೆ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಐಸಿಸಿ ಜೊತೆ ಬಿಸಿಸಿಐ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಅಲ್ಲದೇ ಪಂದ್ಯಗಳ ಸಂಖ್ಯೆ ಹೆಚ್ಚು ಮಾಡಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಮೇಲೆ ಆಗುವ ಪರಿಣಾಮಗಳ ಕುರಿತು ಚಿಂತನೆ ನಡೆದಿದೆ ಎಂದು ಅರುಣ್ ಧಮಲ್ ತಿಳಿಸಿದ್ದಾರೆ.

ಈಗಿರುವ ಮಾದರಿಯಲ್ಲಿ ಟೂರ್ನಿ ನಡೆಯಬೇಕಾದರೆ 94 ಪಂದ್ಯಗಳ ಅವಶ್ಯಕತೆ ಇದೆ. 74, 84 ಮತ್ತು 94 ಪಂದ್ಯಗಳ ಮಾದರಿ ಬಗ್ಗೆ ಪ್ರಸ್ತಾಪ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಯಾವುದು ಅಂತಿಮಗೊಳ್ಳುತ್ತದೆ ಎಂದು ನಿರೀಕ್ಷಿಸುವುದು ಕಷ್ಟ. ಆದರೆ 94 ಪಂದ್ಯಗಳಿಗೆ ನಾವು ಒತ್ತು ನೀಡುತ್ತಿದ್ದೇವೆ ಎಂದು ಅವರು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments