Friday, August 14, 2026
Google search engine
Homeಕ್ರೀಡೆಹಿಂಸೆಗೆ ತಿರುಗಿದ ಫುಟ್ಬಾಲ್ ಪಂದ್ಯ: ರೆಫರಿ ನಿರ್ಣಯಕ್ಕೆ 100 ಮಂದಿ ಬಲಿ!

ಹಿಂಸೆಗೆ ತಿರುಗಿದ ಫುಟ್ಬಾಲ್ ಪಂದ್ಯ: ರೆಫರಿ ನಿರ್ಣಯಕ್ಕೆ 100 ಮಂದಿ ಬಲಿ!

ಕೊನಾಕ್ರಿ: ಫುಟ್ಬಾಲ್ ಪಂದ್ಯವೊಂದು ಅಭಿಮಾನಿಗಳ ನಡುವೆ ಹಿಂಸಾತ್ಮಕ ಮಾರಾಮಾರಿಗೆ ಕಾರಣವಾಗಿ ಸಂಬಂಧಿತ ಬಡಿದಾಟದಲ್ಲಿ ನೂರಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡ ಘೋರ ದುರಂತ ಗಿನಿ ದೇಶದಲ್ಲಿ ನಡೆದಿದೆ.

ಪಶ್ಚಿಮ ಆಫ್ರಿಕಾದಲ್ಲಿರುವ ದೇಶದ ಎರಡನೇ ಅತಿ ದೊಡ್ಡ ನಗರವಾದ ಎನ್ಝೆರೆಕೋರೆಯಲ್ಲಿ ಭಾನುವಾರ ಫುಟ್ಬಾಲ್ ಪಂದ್ಯದ ವೇಳೆ ಈ ಘರ್ಷಣೆ ನಡೆದಿದೆ.

“ಆಸ್ಪತ್ರೆಯ ಮೂಲೆ ಮೂಲೆಗಳಲ್ಲಿ ಕಣ್ಣು ಹಾಯಿಸಿದ ಕಡೆಯೆಲ್ಲ ದೇಹಗಳನ್ನು ಸಾಲಾಗಿ ಇರಿಸಿರುವುದು ಕಾಣಿಸುತ್ತದೆ. ಶವಾಗಾರಗಳು ಭರ್ತಿಯಾಗಿವೆ. ಗಾಯಾಳುಗಳು ಹಜಾರಗಳಲ್ಲಿ ಮಲಗಿದ್ದಾರೆ” ಎಂದು ಆಸ್ಪತ್ರೆಯೊಂದರ ವೈದ್ಯರು ತಿಳಿಸಿದ್ದಾರೆ.

“ಸುಮಾರು ನೂರು ಮಂದಿ ಸತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ಸ್ಥಳೀಯ ಆಸ್ಪತ್ರೆ ಹಾಗೂ ಶವಾಗಾರದಲ್ಲಿ ಶವಗಳು ತುಂಬಿಕೊಂಡಿವೆ. ಆದರೆ ಸಾವು, ನೋವಿನ ನಿಖರವಾದ ಸಂಖ್ಯೆ ಬಹಿರಂಗವಾಗಿಲ್ಲ.

ಮೈದಾನದ ಹೊರಭಾಗದಲ್ಲಿನ ಬೀದಿಗಳಲ್ಲಿ ಭಾರಿ ಗದ್ದಲದ ಸನ್ನಿವೇಶ ಏರ್ಪಟ್ಟಿರುವುದು ಮತ್ತು ಲೆಕ್ಕಕ್ಕೆ ಸಿಗದಷ್ಟು ಶವಗಳು ನೆಲದ ಮೇಲೆ ಅನಾಥವಾಗಿ ಬಿದ್ದಿರುವ ಎದೆನಡುಗಿಸುವ ದೃಶ್ಯಗಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ರೆಫರಿಯ ವಿವಾದಾತ್ಮಕ ನಿರ್ಣಯದ ಬಳಿಕ ವಾಗ್ವಾದ ಶುರುವಾಗಿತ್ತು. ಇದು ವಿಕೋಪಕ್ಕೆ ತಿರುಗಿ, ಅಭಿಮಾನಿಗಳು ಮೈದಾನದ ಒಳಗೆ ನುಗ್ಗಿದ್ದರು. ಫುಟ್ಬಾಲ್ ಮೋಜಿನ ಆಟದ ಸ್ಟೇಡಿಯಂ ರಣರಂಗವಾಗಿ ಮಾರ್ಪಟ್ಟಿದೆ.

ರೆಫರಿ ತೀರ್ಮಾನ ಅಭಿಮಾನಿಗಳಲ್ಲಿ ಅಸಮಾಧಾನ ಉಂಟುಮಾಡಿತ್ತು. ಇದರಿಂದ ಉದ್ರಿಕ್ತರಾದ ಪ್ರೇಕ್ಷಕರು ಸಂಘರ್ಷಕ್ಕೆ ಇಳಿದರು. ಬೀದಿ ಬೀದಿಗಳಲ್ಲಿ ಮಾರಾಮಾರಿ ನಡೆದಿದ್ದು, ಎನ್ಜೆರೆಕೋರೆ ಪೊಲೀಸ್ ಠಾಣೆಗೆ ಕೂಡ ಬೆಂಕಿ ಹಚ್ಚಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments