Friday, May 15, 2026
Google search engine
Homeಕ್ರೀಡೆಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮದುವೆ ಆಗುತ್ತಿರುವ ಹುಡುಗ ಯಾರು ಗೊತ್ತಾ? ಈತನಿಗಿದೆ ಐಪಿಎಲ್ ನಂಟು!

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮದುವೆ ಆಗುತ್ತಿರುವ ಹುಡುಗ ಯಾರು ಗೊತ್ತಾ? ಈತನಿಗಿದೆ ಐಪಿಎಲ್ ನಂಟು!

ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹೈದರಾಬಾದ್ ಮೂಲದ ವೆಂಕಟ ದತ್ತಾ ಸಾಯಿ ಎಂಬುವವರನ್ನು ಡಿಸೆಂಬರ್ ೨೨ರಂದು ಉದಯಪುರದಲ್ಲಿ ಮದುವೆ ಆಗಲಿದ್ದಾರೆ.

ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಭಾನುವಾರ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್ ನ್ಯಾಷನಲ್ ಪ್ರಶಸ್ತಿ ಗೆದ್ದ ಪ್ರಶಸ್ತಿ ಬರ ನೀಗಿಸಿಕೊಂಡ ಬೆನ್ನಲ್ಲೇ ಮದುವೆ ವಿಷಯ ಘೋಷಿಸಲಾಗಿದೆ.

ಎರಡು ಕುಟುಂಬಗಳು ಪರಸ್ಪರ ಪರಿಚಯ ಹೊಂದಿದ್ದು, ಒಂದು ತಿಂಗಳ ಹಿಂದೆಯಷ್ಟೇ ಮದುವೆ ವಿಷಯ ಮಾತುಕತೆ ನಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ ೨೦ರಂದು ಮದುವೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ಡಿಸೆಂಬರ್ ೨೪ಕ್ಕೆ ಅರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್ದ ೨೨ರಂದು ಮದುವೆ ಸಮಾರಂಭ ನಡೆಯಲಿದೆ. ಜನವರಿ ನಂತರ ಬಿಡುವಿಲ್ಲದ ವೇಳಾಪಟ್ಟಿ ಇರುವುದರಿಂದ ತರಾತುರಿಯಲ್ಲಿ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದೆ. ಮುಂದಿನ ಕ್ರೀಡಾ ಋತು ಆರಂಭಗೊಳ್ಳುವುದರಿಂದ ಅಭ್ಯಾಸಕ್ಕೆ ಹೆಚ್ಚಿನ ಸಮಯ ಬೇಕಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿಂಧು ಕೈ ಹಿಡಿಯುತ್ತಿರುವ ಹುಡುಗ ವೆಂಕಟ ದತ್ತಾ ಸಾಯಿ ಪೊಸಿಡೆಕ್ಸ್ ಟೆಕ್ನಾಲಿಜಿಸ್ ಕಂಪನಿಯ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ.

ವೆಂಕಟ ದತ್ತಾ ಸಾಯಿ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸ್ ಪದವಿ ಪಡೆದಿದ್ದು, ಫ್ಲೇಮ್ ವಿಶ್ವವಿದ್ಯಾಲಯದಲ್ಲಿ ಅಕೌಂಟ್ ವಿಭಾಗದಲ್ಲಿ ಬಿಬಿಎ ಪದವಿ ಪಡೆದಿದ್ದಾರೆ. ನಂತರ ಡಾಟಾ ಸೈನ್ಸ್ ಅಂಡ್ ಮೆಷಿನ್ ಲರ್ನಿಂಗ್ ವಿಭಾಗದಲ್ಲಿ ಬೆಂಗಳೂರಿನ ಇಂಟರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇನ್ಫಾರ್ಮೆಷನ್ ಟೆಕ್ನಾಲಜಿಯಲ್ಲಿ ಮಾಸ್ಟರ್ ಡಿಗ್ರಿ ಗಳಿಸಿದ್ದಾರೆ.

ಐಪಿಎಲ್ ತಂಡಗಳ ಮ್ಯಾನೇಜಿಂಗ್ ವಿಭಾಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ಜೆಎನ್ ಡಬ್ಲೂ ತಂಡದಲ್ಲೂ ಕಾರ್ಯ ನಿರ್ವಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments