Wednesday, May 13, 2026
Google search engine
Homeಜಿಲ್ಲಾ ಸುದ್ದಿಕೋಲಾರದಲ್ಲಿ 120 ಅಕ್ರಮ ಕ್ಲಿನಿಕ್ ಗೆ ಬೀಗ!

ಕೋಲಾರದಲ್ಲಿ 120 ಅಕ್ರಮ ಕ್ಲಿನಿಕ್ ಗೆ ಬೀಗ!

ಕೋಲಾರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 152ರ ಪೈಕಿ 120 ಕ್ಲಿನಿಕ್‌ಗಳನ್ನು ಮುಚ್ಚಲಾಗಿದ್ದು, 18 ಪ್ರಕರಣಗಳಲ್ಲಿ ಪಿಸಿಆರ್ ಹಾಗೂ ಎಫ್‌ಐಆರ್ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ ಎಂ.ಆರ್ ರವಿ ನೇತೃತ್ವದಲ್ಲಿ ಶನಿವಾರ ಕೆಪಿಎಂಇ ಜಿಲ್ಲಾ ನೋಂದಣಿ ಪ್ರಾಧಿಕಾರ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಗುರುತಿಸಲಾದ 152 ಸಂಸ್ಥೆಗಳ ಪೈಕಿ 120 ಕ್ಲಿನಿಕ್‌ಗಳನ್ನು ಈಗಾಗಲೇ ಸಂಪೂರ್ಣವಾಗಿ ಮುಚ್ಚಲಾಗಿದೆ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ 18 ಪ್ರಕರಣಗಳಲ್ಲಿ ಪಿಸಿಆರ್ ಹಾಗೂ ಎಫ್‌ಐಆರ್ ದಾಖಲಿಸಿ ಕಾನೂನು ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.

ನಿಯಮಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕ್ಲಿನಿಕ್ ಗಳಿಂದ ಒಟ್ಟಾರೆ 2,00,000 ರೂ. ಗಳ ದಂಡ ವಸೂಲಿ ಮಾಡಲಾಗಿದೆ.  ನೋಟಿಸ್ ನೀಡಿದ ನಂತರ 23 ಕ್ಲಿನಿಕ್‌ಗಳು ಅಧಿಕೃತವಾಗಿ ನೋಂದಣಿ ಮಾಡಿಸಿಕೊಂಡಿದ್ದು, ಉಳಿದ 9 ಪ್ರಕರಣಗಳು ಪ್ರಸ್ತುತ ಬಾಕಿ ಉಳಿದಿವೆ.

ಅತಿ ಹೆಚ್ಚು ಅನಧಿಕೃತ ಕ್ಲಿನಿಕ್‌ಗಳು ಮುಳಬಾಗಿಲು (32) ಹಾಗೂ ಕೋಲಾರ (31) ತಾಲೂಕುಗಳಲ್ಲಿ ಪತ್ತೆಯಾಗಿದ್ದು, ಮುಳಬಾಗಿಲಿನಲ್ಲಿ ಅತಿ ಹೆಚ್ಚು ಅಂದರೆ 9 ಎಫ್‌ಐಆರ್ ದಾಖಲಿಸಲಾಗಿದೆ. ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ತಾಲೂಕುಗಳಲ್ಲಿ ತಲಾ 50,000 ರೂ. ದಂಡ ವಿಧಿಸಲಾಗಿದೆ.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಧಿಕೃತ ಪರವಾನಗಿ ಇಲ್ಲದೆ ವೈದ್ಯಕೀಯ ಸೇವೆ ನೀಡುತ್ತಿರುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್ ರವಿ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments