Monday, August 17, 2026
Google search engine
Homeದೇಶ9ನೇ ಮಹಡಿಯಿಂದ ಹಾರಿ 12, 14, 16 ವರ್ಷದ ಮೂವರು ಸೋದರಿಯರು ಆತ್ಮಹತ್ಯೆ

9ನೇ ಮಹಡಿಯಿಂದ ಹಾರಿ 12, 14, 16 ವರ್ಷದ ಮೂವರು ಸೋದರಿಯರು ಆತ್ಮಹತ್ಯೆ

ಕೊರಿಯನ್ ಮೊಬೈಲ್ ಗೀಳಿಗೆ ಬಿದ್ದಿದ್ದ ಮೂವರು ಸೋದರಿಯರು 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಆನ್‌ಲೈನ್‌ ಗೇಮ್‌ ಆಡಬೇಡಿ, ಶಾಲೆ, ಓದಿನ ಕಡೆ ಗಮನಕೊಡಿ ಎಂದು ಮನೆಯಲ್ಲಿ ಪೋಷಕರು ಗದರಿದ್ದರಿಂದ ನೊಂದ ಮೂವರು ಸೋದರಿಯರು ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾಜಿಯಾಬಾದ್‌ ನಿವಾಸಿಗಳಾದ ಪಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಆತ್ಮಹತ್ಯೆ ಮಾಡಿಕೊಂಡಿದ್ದು, ಮೊಬೈಲ್ ಗೇಮಿಂಗ್ ಮಕ್ಕಳ ಜೀವನ ಹಾಳು ಮಾಡುತ್ತಿರುವ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ಅಪ್ಪ ಅಮ್ಮ ನಮ್ಮನ್ನು ಕ್ಷಮಿಸಿ, ನಮಗೆ ಕೊರಿಯನ್ ಆನ್ ಲೈನ್ ಗೇಮೇ ಸ್ವರ್ಗ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ ನೋಟ್ ಬರೆದಿರುವುದು ಪತ್ತೆಯಾಗಿದೆ.

ಮೂವರು ಸಹೋದರಿಯರು ಸ್ನಾನ, ತಿನ್ನುವುದು, ಶಾಲೆಗೆ ಹೋಗುವುದು, ಮಲಗುವುದು ಮತ್ತು ಇತರ ದಿನನಿತ್ಯದ ಚಟುವಟಿಕೆ ಒಳಗೊಂಡಂತೆ ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಕೋವಿಡ್-19 ಲಾಕ್‌ಡೌನ್‌ ಸಮಯದಲ್ಲಿ ಅವರ ಕೈಗೆ ಮೊಬೈಲ್‌ ಸಿಕ್ಕಿದ ಬಳಿಕ ಆನ್‌ಲೈನ್ ಆಟಗಳ ಚಟಕ್ಕೆ ಬಿದ್ದಿದ್ದರು. ಆನ್‌ಲೈನ್ ಟಾಸ್ಕ್ ಆಧಾರಿತ ‘ಕೊರಿಯನ್ ಲವ್ ಗೇಮ್’ಹೆಚ್ಚು ಆಡುತ್ತಿದ್ದರು ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಸಾವುಗಳಿಗೆ ಸಂಬಂಧಿಸಿದಂತೆ ಬೇರೆ ಆಯಾಮಗಳಲ್ಲೂ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments