Monday, October 26, 2026
Google search engine
Homeದೇಶಆಂಬುಲೆನ್ಸ್‌ ಗೆ ಡಿಕ್ಕಿ ಹೊಡೆದ ರಾಹುಲ್‌ ಗಾಂಧಿಯ 5 ಬೆಂಗಾವಲು ವಾಹನಗಳು: 5 ಮಂದಿಗೆ ಗಾಯ

ಆಂಬುಲೆನ್ಸ್‌ ಗೆ ಡಿಕ್ಕಿ ಹೊಡೆದ ರಾಹುಲ್‌ ಗಾಂಧಿಯ 5 ಬೆಂಗಾವಲು ವಾಹನಗಳು: 5 ಮಂದಿಗೆ ಗಾಯ

ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಬೆಂಗಾವಲು ವಾಹನಗಳು ಆಂಬುಲೆನ್ಸ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ಸಂಭವಿಸಿದೆ.

ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ ಪ್ರೆಸ್‌ ವೇನಲ್ಲಿ ರಾಜಧಾನಿ ಲಕ್ನೋದಿಂದ 100 ಕಿ.ಮೀ. ದೂರದ ಹಲಿಯಾಪುರ್‌ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡವರು ಪಕ್ಷದ ಕಾರ್ಯಕರ್ತರು ಹಾಗೂ ಭದ್ರತಾ ಸಿಬ್ಬಂದಿ ಎಂದು ತಿಳಿದು ಬಂದಿದೆ.

ಆಂಬುಲೆನ್ಸ್‌ ಬಲಭಾಗದಲ್ಲಿ ಓವರ್‌ ಟೇಕ್‌ ಮಾಡುತ್ತಿದ್ದಾಗ ರಾಹುಲ್‌ ಗಾಂಧಿ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ. ಇದರ ಬೆನ್ನಲ್ಲೇ ಹಿಂದಿನಿಂದ ಬರುತ್ತಿದ್ದ ಹಲವು ಬೆಂಗಾವಲು ವಾಹನಗಳು ಸರಣಿ ಡಿಕ್ಕಿ ಹೊಡೆದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ.

ಲಕ್ನೋದಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ರಾಹುಲ್‌ ಗಾಂಧಿ ಬರುತ್ತಿದ್ದಾಗ ಲಕ್ನೋಗೆ ಬರಲು ಕೇವಲ 35 ಕಿ.ಮೀ. ದೂರದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ರಾಹುಲ್‌ ಗಾಂಧಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments