ನದಿಯಲ್ಲಿ ಫೋಟೊ ತೆಗೆಸಿಕೊಳ್ಳಲು ಇಳಿದ ಒಂದೇ ಕುಟುಂಬ ನೀರುಪಾಲಾದ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸಂಭವಿಸಿದೆ.
ಚನ್ನಪಟ್ಟಣ ಮೂಲದ ವಿಜಯಮ್ಮ 50, ಪ್ರಿಯಾಂಕಾ (20), ಮಹೇಶ್, ಚೈತ್ರಾ (20) ಮತ್ತು ಶ್ವೇತಾ (38) ಮೃತಪಟ್ಟ ದುರ್ದೈವಿಗಳು.
ಮತ್ತತ್ತಿಯ ಮುತ್ತತ್ತಿರಾಯನ ದೇವಸ್ಥಾನಕ್ಕೆ ಆಗಮಿಸಿದ್ದ ಕುಟುಂಬ ಕಾವೇರಿ ನದಿಗೆ ಇಳಿದು ಫೋಟೊ ತೆಗೆಸಿಕೊಳ್ಳಲು ಹೋದಾಗ ಈ ದುರಂತ ಸಂಭವಿಸಿದೆ.



