Monday, May 25, 2026
Google search engine
Homeವಿದೇಶಹಾಂಕಾಂಗ್ ನಲ್ಲಿ ಅಗ್ನಿ ದುರಂತದಲ್ಲಿ55ಕ್ಕೇರಿದ ಸಾವಿನ ಸಂಖ್ಯೆ, 279 ಮಂದಿ ಕಣ್ಮರೆ

ಹಾಂಕಾಂಗ್ ನಲ್ಲಿ ಅಗ್ನಿ ದುರಂತದಲ್ಲಿ55ಕ್ಕೇರಿದ ಸಾವಿನ ಸಂಖ್ಯೆ, 279 ಮಂದಿ ಕಣ್ಮರೆ

ಹಾಂಕಾಂಗ್ ನ 7 ಅಂತಸ್ತುಗಳ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 55ಕ್ಕೆ ಏರಿಕೆಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ.

ಬುಧವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ 8 ಅಂತಸ್ತುಗಳ ಹಲವು ಕಟ್ಟಡಗಳ ಕಾಂಪ್ಲೆಕ್ಸ್ ಗೆ ಹರಡಿದ್ದು, 24 ಗಂಟೆ ಕಳೆದರೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.

ಹಾಂಕಾಂಗ್ ನ ಪ್ರಮುಖ ಆಕರ್ಷಣೆಯ ಬಹುಮಹಡಿ ಇದಾಗಿದ್ದು, ನ್ಯೂ ಟೆರಿಟರಿಗಳ ಉಪನಗರವಾದ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯದಲ್ಲಿ 8 ಅಂತಸ್ತುಗಳ 7 ಕಟ್ಟಡಗಳಲ್ಲಿ, 2000 ಅಪಾರ್ಟ್ ಮೆಂಟ್ ಗಳು ಇದ್ದವು. 62 ಮಂದಿ ಗಾಯಗೊಂಡಿದ್ದು, 279 ಮಂದಿ ಕಣ್ಮರೆಯಾಗಿದ್ದಾರೆ.

ಆರ್ಥಿಕತೆಯ ಹಬ್ ಆಗಿರುವ ಹಾಂಕಾಂಗ್ ಇತಿಹಾಸದಲ್ಲೇ ಅತೀ ದೊಡ್ಡ ಅಗ್ನಿ ದುರಂತ ಇದಾಗಿದ್ದು, ದುರಂತ ಸಂಬಂಧ ಮೂವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಕಟ್ಟಡದಲ್ಲಿ ಫೋಮ್ ಪ್ಯಾಕೇಜಿಂಗ್ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಅತಿಯಾದ ನಿರ್ಲಕ್ಷ್ಯ ಕಾರಣಕ್ಕೆ ಮೂವರನ್ನು ಬಂಧಿಸಲಾಗಿದೆ.

ನಿರ್ಮಾಣ ಕಂಪನಿಯೊಂದು ಸ್ಥಾಪಿಸಿರುವ ಗೋಪುರದ ಲಿಫ್ಟ್ ಲಾಬಿ ಬಳಿಯ ಪ್ರತಿ ಮಹಡಿಯ ಕಿಟಕಿಗಳ ಹೊರಗೆ ಹೆಚ್ಚು ದಹಿಸಬಹುದಾದ ಸ್ಟೈರೋಫೋಮ್ ವಸ್ತುಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಮಾಣ ಕಂಪನಿಯ ಉಸ್ತುವಾರಿ ವಹಿಸಿದ್ದವರು ತೀವ್ರ ನಿರ್ಲಕ್ಷ್ಯ ಮಾಡಿದರು ಎಂದು ಹಿರಿಯ ಪೊಲೀಸ್ ಅಧೀಕ್ಷಕ ಐಲೀನ್ ಚುಂಗ್ ಹೇಳಿದರು. 52 ರಿಂದ 68 ವರ್ಷ ವಯಸ್ಸಿನ ಬಂಧಿತ ಮೂವರು ವ್ಯಕ್ತಿಗಳು ಸಂಸ್ಥೆಯ ನಿರ್ದೇಶಕರು ಮತ್ತು ಎಂಜಿನಿಯರಿಂಗ್ ಸಲಹೆಗಾರರಾಗಿದ್ದಾರೆ.

ಅಗ್ನಿಶಾಮಕ ಸೇವೆಗಳ ಇಲಾಖೆಯ ಪ್ರಕಾರ, ಇಂದು ಬೆಳಗ್ಗೆ ನಾಲ್ಕು ಕಟ್ಟಡಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬರುತ್ತಿದೆ. ಬೆಂಕಿಯು 32 ಅಂತಸ್ತಿನ ಗೋಪುರವಾದ ಕಟ್ಟಡಗಳಲ್ಲಿ ಒಂದಾದ ಬಾಹ್ಯ ಸ್ಕ್ಯಾಫೋಲ್ಡಿಂಗ್‌ನಲ್ಲಿ ಪ್ರಾರಂಭವಾಯಿತು. ನಂತರ ಕಟ್ಟಡದ ಒಳಗೆ ಮತ್ತು ಹತ್ತಿರದ ಕಟ್ಟಡಗಳಿಗೆ ಹರಡಿತು.

ವಾಂಗ್ ಫುಕ್ ಕೋರ್ಟ್ ಸಂಕೀರ್ಣದಲ್ಲಿರುವ ಎಂಟು ಅಂತಸ್ತುಗಳಲ್ಲಿ ಏಳರಲ್ಲಿ ಬೆಂಕಿ ಹರಡುತ್ತಿದ್ದಂತೆ ನೂರಾರು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು, ಕಿಟಕಿಗಳಿಂದ ಪ್ರಕಾಶಮಾನವಾದ ಜ್ವಾಲೆಗಳು ಮತ್ತು ಹೊಗೆ ಹೊರಬರುತ್ತಿದ್ದವು.

ಬೆಂಕಿಯ ತ್ವರಿತ ಹರಡುವಿಕೆ ಅಸಾಮಾನ್ಯವಾಗಿರುವುದರಿಂದ ಎತ್ತರದ ಕಟ್ಟಡಗಳ ಹೊರ ಗೋಡೆಗಳ ಮೇಲಿನ ಕೆಲವು ವಸ್ತುಗಳು ಬೆಂಕಿ ನಿರೋಧಕ ಮಾನದಂಡಗಳನ್ನು ಪೂರೈಸಲಿಲ್ಲ, ಇದರಿಂದಾಗಿ ಸಾವು ನೋವು ಅಧಿಕವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments