Wednesday, 28 October 2026 — Kannadavahini
BREAKING NEWS
ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ ಅಪರಾಧ ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ಎನ್ ಐಎ ತನಿಖೆ ರಾಜ್ಯ ಐತಿಹಾಸಿಕ ಜಂಬೂಸವಾರಿ: ಚಾಮುಂಡೇಶ್ವರಿ ಮೆರವಣಿಗೆಗೆ ಸಿಎಂ ಪುಷ್ಪಾರ್ಚನೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ ಅಪರಾಧ ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ಎನ್ ಐಎ ತನಿಖೆ ರಾಜ್ಯ ಐತಿಹಾಸಿಕ ಜಂಬೂಸವಾರಿ: ಚಾಮುಂಡೇಶ್ವರಿ ಮೆರವಣಿಗೆಗೆ ಸಿಎಂ ಪುಷ್ಪಾರ್ಚನೆ
ದೇಶ

ಉತ್ತರಾಖಂಡ್ ನಲ್ಲಿ ಹೆಲಿಕಾಫ್ಟರ್ ಪತನ: 5 ಮಹಿಳೆಯರು ಸೇರಿ 6 ಮಂದಿ ದುರ್ಮರಣ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
1 ನಿಮಿಷ ಓದು 1 ವೀಕ್ಷಣೆಗಳು
uttara kashi

ಹೆಲಿಕಾಫ್ಟರ್ ಪತನಗೊಂಡ ಪರಿಣಾಮ 6 ಮಂದಿ ಮೃತಪಟ್ಟು, ಒಬ್ಬ ಗಾಯಗೊಂಡಿರುವ ಘಟನೆ ಉತ್ತರಾಖಂಡ್ ನ ಉತ್ತರಕಾಶಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಮೃತಪಟ್ಟ 6 ಮಂದಿಯಲ್ಲಿ 5 ಮಂದಿ ಮಹಿಳೆಯರು ಹಾಗೂ ಒಬ್ಬ ಪೈಲೆಟ್ ಸೇರಿದ್ದಾರೆ. ಮುಂಬೈನ ಕಾಲಾ ಸೋನಿ (61), ವಿಜಯ ರೆಡ್ಡಿ (57), ರುಚಿ ಅಗರ್ ವಾಲ್ (56), ಉತ್ತರ ಪ್ರದೇಶದ ರಾಧಾ ಅಗರ್ ವಾಲ್ (79) ಮತ್ತು ಆಂಧ್ರಪ್ರದೇಶದ ವೇದಾವತಿ (48) ಮೃತಪಟ್ಟಿದ್ದಾರೆ.

ಗುಜರಾತ್ ಮೂಲದ 60 ವರ್ಷದ ಪೈಲೆಟ್ ರಾಬಿನ್ ಸಿಂಗ್ ಮೃತಪಟ್ಟಿದ್ದು, ಆಂಧ್ರಪ್ರದೇಶದ ಭಾಸ್ಕರ್ (51) ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರಾಖಂಡ್ ಮುಖ್ಯಮಂತ್ರಿ  ಪುಷ್ಕರ್ ಸಿಂಗ್ ಧಮನಿ ಈ ದುರಂತ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮೃತರ ಆತ್ಮಗಳಿಗೆ ಶಾಂತಿ ಕೋರಿದ್ದಾರೆ.

ಪ್ರವಾಸಿಗರು ಗಂಗನಾನಿ ರಸ್ತೆ ಮಾರ್ಗವಾಗಿ ಸುಮಾರು 30 ಕಿ.ಮೀ. ಪ್ರಯಾಣಿಸಿದ ಬಳಿ ಹೆಲಿಕಾಫ್ಟರ್ ಮಾರ್ಗವಾಗಿ ಡೆಹ್ರಾಡೂನ್ ನಿಂದ ಹರ್ಸಿಲ್ ಗೆ ಪ್ರಯಾಣ ಬೆಳೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ಮೃತರ ಶವಗಳನ್ನು ಸಾಗಿಸಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8389 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment