Saturday, May 16, 2026
Google search engine
Homeಅಪರಾಧ6 ವರ್ಷದ ಬಾಲಕಿ ಮೇಲೆ ಮಸೀದಿಯಲ್ಲಿ 55 ವರ್ಷದ ಮೌಲ್ವಿ ತಂದೆಯಿಂದ ಅತ್ಯಾಚಾರ

6 ವರ್ಷದ ಬಾಲಕಿ ಮೇಲೆ ಮಸೀದಿಯಲ್ಲಿ 55 ವರ್ಷದ ಮೌಲ್ವಿ ತಂದೆಯಿಂದ ಅತ್ಯಾಚಾರ

ಮಸೀದಿ ಕೊಠಡಿಯಲ್ಲಿ 6 ವರ್ಷದ ಬಾಲಕಿ ಮೇಲೆ 55 ವರ್ಷದ ಮೌಲ್ವಿಯ ತಂದೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಗರದ ಶಮ್ಸ್ ಮಸೀದಿ ಕೊಠಡಿಯಲ್ಲಿ ಮೌಲ್ವಿಯ ತಂದೆ ಮಹಪ್ಯೂಸ್ 6 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೇರೊಂದು ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮೌಲ್ವಿಯ ಆಶ್ರಯಕ್ಕೆ ಮಸೀದಿಯ ಕೊಠಡಿಯನ್ನು ಜಮಾತ್ ನೀಡಿತ್ತು. ಅದೇ ಕೊಠಡಿಯನ್ನು ಆರೋಪಿ ದುರುಪಯೋಗಪಡಿಸಿಕೊಂಡಿದ್ದಾನೆ. ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಉತ್ತರ ಪ್ರದೇಶ ಮೂಲದ ಆರೋಪಿ ಮಹಪ್ಯೂಸ್ 20 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದು ನೆಲೆಸಿದ್ದು, ಬೀದಿಬದಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಾನೆ. ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಮಸೀದಿಯ ಮೌಲ್ವಿ ಸುಹೇಬ್​ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೌಲ್ವಿಯ ಆಶ್ರಯಕ್ಕೆಂದು ಪಡೆದ ಕೊಠಡಿಯನ್ನು ತಂದೆಗೆ ಯಾಕೆ ನೀಡಿದ್ದು ಪ್ರಶ್ನಿಸಿದ್ದಾರೆ. ಬಾಲಕಿಯ ತಾಯಿ ಆರೋಪಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments