ಅಪರಿಚಿತರನ್ನು ಪರಿಚಯ ಮಾಡಿಕೊಂಡು ಆತ್ಮೀಯರಂತೆ ನಟಿಸಿ ಡ್ರಿಂಕ್ಸ್ ನಲ್ಲಿ ಸೈನೈಡ್ ಬೆರೆಸಿ ಕೊಲೆ ಮಾಡುತ್ತಿದ್ದ ಸೀರಿಯಲ್ ಕಿಲ್ಲರ್ ಲೇಡಿಸ್ ಗ್ಯಾಂಗ್ ಆಂಧ್ರಪ್ರದೇಶ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.
ಆಂದ್ರಪ್ರದೇಶದ ತೆನಾಲಿ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಹತ್ಯೆಗೈದಿದ್ದ ಮೂವರು ಮಹಿಳೆಯರ ಗ್ಯಾಂಗ್ ಸೆರೆ ಹಿಡಿಯಲಾಗಿದೆ.
ಮುನಗಪ್ಪ ರಜನಿ, ಮಡಿಯಾಳ ವೆಂಕಟೇಶ್ವರಿ ಮತ್ತು ಗುರ್ಲಾ ರಮಣಮ್ಮ ಬಂಧಿತರು.
ಅಪರಿಚಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿದ್ದ ಈ ಗ್ಯಾಂಗ್, ಸೈನೈಡ್ ಮಿಶ್ರಿತ ಪಾನೀಯ ಸೇವಿಸಿದ ಕೂಡಲೆ ಸಾಯುತ್ತಿದ್ದರು. ಕೂಡಲೇ ಅವರ ಬಳಿ ಇದ್ದ ಚಿನ್ನಾಭರಣ, ನಗದು ಕದ್ದು ಪರಾರಿಯಾಗುತ್ತಿದ್ದರು.
32 ವರ್ಷದ ಮಡಿಯಾಳ ವೆಂಕಟೇಶ್ವರಿ ಈ ಹಿಂದೆ ಕೂಡ ಸೈನೈಡ್ ಅಪರಾಧಗಳಲ್ಲಿ ಕಾಣಿಸಿಕೊಂಡಿದ್ದಳು. ತೆನಾಲಿಯಿಂದ ಚಿತ್ತೂರಿಗೆ ಹೋಗಿದ್ದ ಆಕೆ ಮರಳಿ ಬಂತರ ಇಬ್ಬರನ್ನು ಸೇರಿಸಿಕೊಂಡು ಸರಣಿ ಕೊಲೆಗೆ ಇಳಿದಿದ್ದಳು.
ಜೂನ್ ತಿಂಗಳಲ್ಲಿ ಇದೇ ಸೈನೈಡ್ ನೀಡಿ ದರೋಡೆಗೆ ಯತ್ನಿಸಿದ್ದು, ಒಬ್ಬರು ಮೃತಪಟ್ಟಿದ್ದು, ಆಕೆಯ ಇಬ್ಬರು ಮಕ್ಕಳು ಪಾರಾಗಿದ್ದರು. ಈ ಘಟನೆಯ ಸುಳಿವಿನ ಆಧಾರದ ಮೇಲೆ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.