ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಸ್ತಿ ಮೌಲ್ಯ ಒಟ್ಟಾರೆ 30 ಕೋಟಿ ರೂ. ಆಗಿದ್ದು, ಸ್ವಂತ ವಾಹನ ಹಾಗೂ ಮನೆ ಇಲ್ಲ!
ಬುಧವಾರ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ ಅಫಿದಾವಿತ್ ನಲ್ಲಿ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಇದರಲ್ಲಿ 9.24 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 11 ಕೋಟಿ ಮೌಲ್ಯದ ಸ್ಥಿರಾಸ್ಥಿ ಹೊಂದಿರುವುದಾಗಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಕೈಯಲ್ಲಿ 55 ಸಾವಿರ ರೂ. ನಗದು ಹೊಂದಿದ್ದು, 36.5 ಲಕ್ಷ ರೂ. ಬ್ಯಾಂಕ್ ಠೇವಣಿ, 4.33 ಕೋಟಿ ರೂ. ಮೌಲ್ಯದ ಬಾಂಡ್ ಮತ್ತು ಷೇರು, 3.81 ಕೋಟಿ ಮೌಲ್ಯದ ಮ್ಯೂಚ್ಯೂವಲ್ ಫಂಡ್, 15.21 ಲಕ್ಷದ ಚಿನ್ನದ ಬಾಂಡ್ ಮತ್ತು 4.20 ಲಕ್ಷದ ಆಭರಣಗಳನ್ನು ಹೊಂದಿರುವುದಾಗಿ ಘೋಷಿಸಿದ್ಧಾರೆ.
ರಾಹುಲ್ ಗಾಂಧಿ ಬಳಿ 11.25 ಕೋಟಿ ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದು, ಇದರಲ್ಲಿ ದೆಹಲಿಯ ಮೆಹ್ರುಲಿಯಲ್ಲಿ ಸೋದರಿ ಪ್ರಿಯಾಂಕಾ ಗಾಂಧಿ ಸಹಭಾಗಿತ್ವದಲ್ಲಿ ಕೃಷಿ ಭೂಮಿ ಹೊಂದಿದ್ದಾರೆ. ಗುರ್ರಾಂವ್ ನಲ್ಲಿ ಕಚೇರಿ ಹೊಂದಿದ್ದು, ಇದರ ಮೌಲ್ಯ 9 ಕೋಟಿ ರೂ. ಆಗಿದೆ.