Friday, October 18, 2024
Google search engine
Homeಕ್ರೀಡೆವನಿತೆಯರ ಟಿ-20 ವಿಶ್ವಕಪ್: ಸೋತಿದ್ದು ಪಾಕಿಸ್ತಾನ, ಹೊರಬಿದ್ದಿದ್ದು ಭಾರತ!

ವನಿತೆಯರ ಟಿ-20 ವಿಶ್ವಕಪ್: ಸೋತಿದ್ದು ಪಾಕಿಸ್ತಾನ, ಹೊರಬಿದ್ದಿದ್ದು ಭಾರತ!

ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಹೀನಾಯವಾಗಿ ಸೋತಿದ್ದರಿಂದ ಭಾರತ ತಂಡ ವನಿತೆಯರ ಟಿ-20 ವಿಶ್ವಕಪ್ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿದೆ. ಈ ಮೂಲಕ 8 ಆವೃತ್ತಿಗಳ ಪೈಕಿ ಇದೇ ಮೊದಲ ಬಾರಿ ಭಾರತ ವನಿತೆಯರು ಗುಂಪು ಹಂತದಲ್ಲೇ ನಿರ್ಗಮಿಸಿ ಮುಖಭಂಗಕ್ಕೆ ಒಳಗಾಗಿದೆ.

ಭಾರತ ತಂಡ ಭಾನುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್ ಗಳಿಂದ ಸೋಲುಂಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ಸೋತಿದ್ದರಿಂದ ಭಾರತಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಲಭಿಸುವ ಸಾಧ್ಯತೆ ಇತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ವನಿತೆಯರು 54 ರನ್ ಗಳ ಭಾರೀ ಅಂತರದಿಂದ ಸೋಲುಂಡಿತು.

ಸೋತ ಪಾಕಿಸ್ತಾನ ಮತ್ತು ಭಾರತ ತಂಡಗಳು ಸೆಮಿಫೈನಲ್ ರೇಸ್ ನಿಂದ ಹೊರಬಿದ್ದರು. ಭಾರತ ಎ ಗುಂಪಿನಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಸೆಮಿಫೈನಲ್ ರೇಸ್ ನಿಂದ ಹೊರಬೀಳುವ ಮೂಲಕ 5 ಬಾರಿ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆ ಹೊಂದಿದ್ದ ಭಾರತ ಇದೇ ಲೀಗ್ ಹಂತದಲ್ಲೇ ನಿರ್ಗಮಿಸಿತು.

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ವನಿತೆಯರು 6 ವಿಕೆಟ್ ಗೆ 110 ರನ್ ಕಲೆಹಾಕಿದರೆ, ಪಾಕಿಸ್ತಾನ ವನಿತೆಯರು 11.4 ಓವರ್ ಗಳಲ್ಲಿ 56 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments