ತಂದೆ ಪಡೆದ ಸಾಲ ವಾಪಸ್ ಮಾಡಿಲ್ಲ, ಬಡ್ಡಿ ಕಟ್ಟಿಲ್ಲ ಅಂತ ಆಕೆಯ 17 ವರ್ಷದ ಮಗಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರವಿ ಕುಮಾರ್ (39) ಎಂಬಾತನನ್ನು ಬಂಧಿಸಲಾಗಿದೆ.
ರವಿಕುಮಾರ್ ನಿಂದ ತಂದೆ 70 ಸಾವಿರ ರೂ. ಪಡೆದಿದ್ದು, 30 ಸಾವಿರ ರೂ. ಹಿಂತಿರುಗಿಸಿದ್ದರು. ಆದರೆ ಬಾಕಿ ಉಳಿದ 40 ಸಾವಿರ ರೂ. ಹಾಗೂ ಅದರ ಮೇಲಿನ ಬಡ್ಡಿ ನೀಡಿರಲಿಲ್ಲ.
ಸಾಲ ಮತ್ತು ಬಡ್ಡಿ ನೀಡಿಲ್ಲ ಎಂದು ರವಿಕುಮಾರ್ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯುವತಿ ನೀಡಿದ ದೂರಿನ ಮೇಲೆ ರವಿಕುಮಾರ್ ನನ್ನು ಬಂಧಿಸಲಾಗಿದೆ.
ಹಿಂದೆ ಬಲವಂತವಾಗಿ ಬಾಲಕಿಗೆ ರವಿಕುಮಾರ್ ಕಿಸ್ ಕೊಟ್ಟಿದ್ದ. ಕಿಸ್ ಕೊಟ್ಟಿರುವುದನ್ನು ಫೋಟೋ ತೆಗೆದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಇಂದು ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ.