Thursday, November 21, 2024
Google search engine
Homeಅಪರಾಧಪ್ರೇಯಸಿಯ 7 ವರ್ಷದ ಬಾಲಕನ್ನು ಕಾಲುವೆಗೆ ಎಸೆದು ಕೊಲೆಗೈ ಪ್ರಿಯಕರ!

ಪ್ರೇಯಸಿಯ 7 ವರ್ಷದ ಬಾಲಕನ್ನು ಕಾಲುವೆಗೆ ಎಸೆದು ಕೊಲೆಗೈ ಪ್ರಿಯಕರ!

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪ್ರೇಯಸಿಯ 7 ವರ್ಷದ ಮಗನನ್ನು ಪ್ರಿಯಕರ ಕಾಲುವೆಗೆ ಎಸೆದು ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದ ಹೆಚ್ ಎಲ್ ಸಿ ಕಾಲುವೆಗೆ ಎಸೆದು 7 ವರ್ಷದ ಬಾಲಕ ಅಭಿಯನ್ನು ಹತ್ಯೆ ಮಾಡಲಾಗಿದ್ದು, 3 ದಿನಗಳ ನಂತರ ಕೊಲೆ ಪ್ರಕರಣ ಬಯಲಿಗೆ ಬಂದಿದೆ. 24 ವರ್ಷದ ಓಬಳೇಶ್ ನನ್ನು ಬಂಧಿಸಲಾಗಿದೆ.

ಶಾಲೆಗೆ ಹೋಗಿದ್ದ ಅಭಿ ಮನೆಗೆ ವಾಪಸ್ ಬರುವಾಗ ಕರೆದೊಯ್ದಿದ್ದ ಓಬಳೇಶ್ ಹೆಚ್ ಎಲ್ ಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದ. ಗಂಡನನ್ನು ತೊರೆದು ಓಬಳೇಶ್ ಜೊತೆ ವಾಸವಾಗಿದ್ದ ಪ್ರೇಯಸಿಗೆ ಮೊದಲ ಗಂಡನಿಂದ ಜನಿಸಿದ್ದ ಮಗು ಶಾಲೆಯಿಂದ ವಾಪಸ್ ಬಂದಿಲ್ಲ ಎಂದು ಕಥೆ ಕಟ್ಟಿದ್ದ.

ತನಿಖೆ ನಡೆಸಿದ ಕಮಲಾಪುರ ಪೊಲೀಸರು ಓಬಳೇಶ್ ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments