Sunday, June 14, 2026
Google search engine
Homeಅಪರಾಧಬೆಂಗಳೂರಿನಲ್ಲಿ ಘೋರ ಘಟನೆ: ಪ್ರೇಯಸಿ ಕತ್ತು ಸೀಳಿ ಪ್ರಿಯಕರ ಹತ್ಯೆ

ಬೆಂಗಳೂರಿನಲ್ಲಿ ಘೋರ ಘಟನೆ: ಪ್ರೇಯಸಿ ಕತ್ತು ಸೀಳಿ ಪ್ರಿಯಕರ ಹತ್ಯೆ

ಪ್ರೇಯಸಿಯ ಕತ್ತು ಸೀಳಿ ಪ್ರೇಯಸಿಯನ್ನು ಪ್ರಿಯಕರ ಕೊಲೈಗೈದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸಿಕ್ಕಿಂ ಮೂಲದ ಯುವತಿ ಕೊಲೆಯಾಗಿದ್ದಾಳೆ.

ಸಿಕ್ಕಿಂನಲ್ಲಿ ಒಂದು ವರ್ಷದಿಂದ ಲೀವಿಂಗ್‌ ರಿಲೇಷನ್‌ ಶಿಪ್‌ ನಲ್ಲಿದ್ದ ಜೋಡಿ ಒಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದರು.

ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಸಿಕ್ಕಿಂನ ಯುವತಿ ಅಟಿ ಹಂಗ್ಮಾ ಸುಭಾ (22) ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಆರೋಪಿ ಪುರ್ಬಾ ಲೆಪ್ಚಾ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಒಂದು ವರ್ಷ ಸಿಕ್ಕಿಂನಲ್ಲಿ ಒಟ್ಟಿಗೆ ಇದ್ದರು. ಬಳಿಕ ಕೆಲಸಕ್ಕಾಗಿ ಒಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ದೊಡ್ಡಕನ್ನಳ್ಳಿಯಲ್ಲಿನ ಅಪಾರ್ಟ್​ಮೆಂಟ್​ ವೊಂದಲ್ಲಿ ಒಟ್ಟಿ ವಾಸವಾಗಿದ್ದರು. ಯುವತಿ ಸಲೂನ್‌ವೊಂದರಲ್ಲಿ ರಿಸೆಪ್ಶನಿಸ್ಟ್ ಕೆಲಸಕ್ಕೆ ಸೇರಿದ್ದಳು. ಆರೋಪಿ ಇದೇ ಏರಿಯಾದ ಹೋಟೆಲ್‌ವೊಂದರಲ್ಲಿ ವೇಟರ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಯಸಿ ಮೇಲೆ ಅನುಮಾನ: ಇತ್ತೀಚಿಗೆ ಯುವತಿಗೆ ಮತ್ತೊಬ್ಬ ಯುವಕನ ಜೊತೆ ಸಂಪರ್ಕವಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಕಲಹವುಂಟಾಗಿತ್ತು. ಇಂದು ಬೆಳಿಗ್ಗೆಯೂ ಅದೇ ವಿಚಾರವಾಗಿ ವಾಗ್ವಾದ ನಡೆದಿದೆ. ವಾದ ತೀವ್ರಗೊಂಡಾಗ ಆರೋಪಿ, ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಯುವತಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ.

ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments