Thursday, November 21, 2024
Google search engine
Homeಜಿಲ್ಲಾ ಸುದ್ದಿಮುಡಾ ಸೈಟ್ ಅಕ್ರಮ: ಬೆಂಗಳೂರು, ಮೈಸೂರು ಸೇರಿ 9 ಕಡೆ ಇಡಿ ದಾಳಿ

ಮುಡಾ ಸೈಟ್ ಅಕ್ರಮ: ಬೆಂಗಳೂರು, ಮೈಸೂರು ಸೇರಿ 9 ಕಡೆ ಇಡಿ ದಾಳಿ

ಮುಡಾ ಸೈಟ್‌ ಅಕ್ರಮಕ್ಕೆ ಸಂಬಂಧಿಸಿ ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುಡಾ ಮಾಜಿ ಅಧ್ಯಕ್ಷ ಹಾಗೂ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಶನಿವಾರ ಮುಡಾ ಅಧಿಕಾರಿಗಳ ಹೇಳಿಕೆಯನ್ನು ಇಡಿ ಪಡೆದುಕೊಂಡಿತ್ತು. ಈ ಬೆಳವಣಿಗೆಯ ನಂತರ ಈ ದಾಳಿ ನಡೆದಿದೆ. ಬೆಂಗಳೂರಿನ ಸ್ಯಾಂಕಿ ರಸ್ತೆ ಮತ್ತು ಜೆಪಿ ನಗರದಲ್ಲಿ ದಾಳಿ ನಡೆದು ಪರಿಶೀಲನೆ ನಡೆಯುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಸೈಟು ಅಕ್ರಮ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ದಾಳಿ ನಡೆಸಿದೆ. ಇತ್ತೀಚೆಗಷ್ಟೆ ಸಿಎಂ ಪತ್ನಿ ಪಾರ್ವತಿ ಅವರನ್ನು ಲೋಕಾಯುಕ್ತ ವಿಚಾರಣೆಗೊಳಪಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಇಡಿ ದಾಖಲೆಗಳ ಪರಿಶೀಲನೆಗೆ ಇಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments