ವಿಶ್ವದ ಏಕೈಕ ಅತಿದೊಡ್ಡ ಕಲ್ಲಿದ್ದಲು ಉತ್ಪಾದನಾ ಕಂಪನಿಯಾದ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನಲ್ಲಿ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ.
ಭಾರತ ಸರ್ಕಾರದ ಸಚಿವಾಲಯದ ಅಡಿಯಲ್ಲಿ ಸಿಐಎಲ್ ಕಾರ್ಯನಿರ್ವಹಿಸುತ್ತಿದ್ದು ಕೋಲ್ಕತ್ತಾದಲ್ಲಿ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಕಂಪನಿಯಲ್ಲಿ 2.25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸದ್ಯ ಇದೀಗ ಕೆಲ ಉದ್ಯೋಗಗಳನ್ನು ಕೋಲ್ ಇಂಡಿಯಾ ಲಿಮಿಟೆಡ್ ಭರ್ತಿ ಮಾಡುತ್ತಿದೆ.
ಮ್ಯಾನೇಜ್ಮೆಂಟ್ ಟ್ರೈನಿಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅಪ್ಲೇ ಮಾಡಬಹುದಾಗಿದೆ. ಇನ್ನು ನಿಮಗೆ ಬೇಕಾದಂತಹ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಎಲ್ಲವನ್ನು ಸರಿಯಾಗಿ ಗಮನಿಸಿ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ coalindia.in ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು- ಮ್ಯಾನೇಜ್ಮೆಂಟ್ ಟ್ರೈನಿ (ಇ-2 ಗ್ರೇಡ್) ಒಟ್ಟು ಹುದ್ದೆಗಳು: 640 ಕೆಲಸ ಮಾಡುವ ಸ್ಥಳ- ಭಾರತದ್ಯಾಂತ ಸ್ಯಾಲರಿ- ತಿಂಗಳ ಸಂಬಳ- ಟ್ರೈನಿಯಲ್ಲಿ 50,000 ಟ್ರೈನಿಂಗ್ ಮುಗಿದ ಮೇಲೆ 60,000- 1,80,000
ವಯಸ್ಸಿನ ಮಿತಿ: 30 ವರ್ಷದ ಒಳಗಿನ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ- ಒಬಿಸಿ- 3 ವರ್ಷಗಳು ಎಸ್ಸಿ, ಎಸ್ಟಿ- 5 ವರ್ಷಗಳು ವಿಶೇಷ ಚೇತನರು- 10 ವರ್ಷಗಳು
ಶೈಕ್ಷಣಿಕ ಅರ್ಹತೆ: ಬಿಇ, ಬಿಟೆಕ್, ಬಿಎಸ್ಸಿ, ಎಂಸಿಎ, ಅರ್ಜಿ ಶುಲ್ಕ ಎಷ್ಟು ಇರುತ್ತೆ..? ಸಾಮಾನ್ಯ ಅಭ್ಯರ್ಥಿಗಳು, ಒಬಿಸಿ- 1180 ರೂ.ಗಳು ಎಸ್ಸಿ, ಎಸ್ಟಿ- ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಗೇಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಅನ್ನು 1:3 ಅಂತೆ ಸಿದ್ಧಪಡಿಸಲಾಗುತ್ತೆ. ದಾಖಲಾತಿ ಪರಿಶೀಲನೆ ವೈದ್ಯಕೀಯ ಪರೀಕ್ಷೆ ಪ್ರಮುಖ ದಿನಾಂಕ ಅರ್ಜಿ ಸಲ್ಲಿಸಲು
ಕೊನೆಯ ದಿನಾಂಕ- 28 ನವೆಂಬರ್ 2024