Saturday, November 23, 2024
Google search engine
Homeಅಪರಾಧಚಿತ್ರಹಿಂಸೆ ನೀಡಿ ಕೊಲೆಗೈದ ಮನೆ ಕೆಲಸದ ಹುಡುಗಿಯ ಶವ ಟಾಯ್ಲೆಟ್ ನಲ್ಲಿ ಹಾಕಿದ ದಂಪತಿ!

ಚಿತ್ರಹಿಂಸೆ ನೀಡಿ ಕೊಲೆಗೈದ ಮನೆ ಕೆಲಸದ ಹುಡುಗಿಯ ಶವ ಟಾಯ್ಲೆಟ್ ನಲ್ಲಿ ಹಾಕಿದ ದಂಪತಿ!

ಮನೆ ಕೆಲಸಕ್ಕೆ ಬಂದಿದ್ದ 15 ವರ್ಷದ ಬಾಲಕಿಗೆ ಚಿತ್ರ ಹಿಂಸೆ ನೀಡಿ ಕೊಲೆಗೈದ ದಂಪತಿ ಶವವನ್ನು ಶೌಚಾಲಯದಲ್ಲಿ ಹಾಕಿ ಪರಾರಿಯಾದ ಆಘಾತಕಾರಿ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.

ಅಮಿನ್ ಜಿ ಕರಾರಿ ಪ್ರದೇಶದ ಮೆಹ್ತಾ ನಗರದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ.

ಮೊಹಮದ್ ನಿಶಾದ್ ಮತ್ತು ನಾಸಿಯಾ ದಂಪತಿ ಬಾಲಕಿಗೆ ಕಾದ ಕಬ್ಬಿಣದ ಸಲಾಕೆಯಿಂದ ಬರೆ ಎಳೆದಿದ್ದು, ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ. ಚಿತ್ರಹಿಂಸೆ ತಡೆಯದೇ ಮೃತಪಟ್ಟ ಬಾಲಕಿಯ ಶವವನ್ನು ಮನೆಯ ಶೌಚಾಲಯದಲ್ಲಿ ಹಾಕಿ ಸೋದರಿಯ ಮನೆಗೆ ಹೋಗಿ ತಲೆಮರೆಸಿಕೊಂಡಿದ್ದಾರೆ.

ತಂಜಾವೂರಿನ ವಿಧವೆ ತಾಯಿಯ ಮಗಳಾದ ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಖಚಿತ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments