ದೇವಸ್ಥಾನಕ್ಕೆ ಬಂದಿದ್ದ ಹಿಂದೂಗಳ ಮೇಲೆ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಕೆನಡಾದಲ್ಲಿ ನಡೆದಿದೆ.
ಕೆನಡಾದ ಬ್ರಂಟೌನ್ ನಲ್ಲಿ ಹಿಂದೂ ಸಭಾಮಂದಿರದ ಬಳಿ ಖಾಲಿಸ್ತಾನ ಧ್ವಜ ಹಿಡಿದ ಗುಂಪು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಹಿಂದೂಗಳು ಲಕ್ಷ್ಮಣರೇಖೆ ದಾಟಿದ್ದಾರೆ ಎಂದು ಆರೋಪಿಸಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಹಲ್ಲೆ ನಡೆಸಿದ್ದು, ಫೋಟೊ ಹಾಗೂ ವೀಡಿಯೋಗಳು ವೈರಲ್ ಆಗಿವೆ.
ಹಿಂದೂಗಳ ಮೇಲೆ ಹಲ್ಲೆಯನ್ನು ಕೆನಡಾ ಜನಪ್ರತಿನಿಧಿಗಳು ಖಂಡಿಸಿದ್ದು, ಪ್ರಧಾನಿ ಜಸ್ಟಿನ್ ಟ್ರೈಬು ಖಂಡಿಸಿದ್ದು, ದೇಶದಲ್ಲಿ ಹಿಂಸಾಚಾರ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.