Thursday, November 21, 2024
Google search engine
Homeಅಪರಾಧಬೆಂಗಳೂರು: ಕತ್ತುಕೊಯ್ದು ಪತ್ನಿ ಕೊಂದು, ತಾನು ಕತ್ತು ಕೊಯ್ದುಕೊಂಡ ಪತಿ!

ಬೆಂಗಳೂರು: ಕತ್ತುಕೊಯ್ದು ಪತ್ನಿ ಕೊಂದು, ತಾನು ಕತ್ತು ಕೊಯ್ದುಕೊಂಡ ಪತಿ!

ಪತ್ನಿಯ ಕತ್ತುಕೊಯ್ದ ಪತಿ ತಾನೂ ಕತ್ತು ಕೊಯ್ದುಕೊಂಡ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜೀವಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಪತ್ನಿ ಸಂಗೀತಾ ಮೃತಪಟ್ಟಿದ್ದು, ಪತಿ ನಾಗರಾಜ್ ಸ್ಥಿತಿ ಗಂಭೀರವಾಗಿದೆ.

ಪತ್ನಿಯ ಶೀಲ ಶಂಕಿಸಿ ಪತಿ ನಾಗರಾಜ್ ಚಾಕುವಿನಿಂದ ಈ ಕೃತ್ಯ ಎಸಗಿದ್ದಾನೆ. ಕತ್ತು ಕೊಯ್ದುಕೊಂಡ ನಾಗರಾಜ್ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಜೀವಭೀಮಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಗೀತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments