Friday, November 22, 2024
Google search engine
HomeಅಪರಾಧDavanagere ತೆಲುಗು ಸಿನಿಮಾದಿಂದ ಪ್ರೇರಣೆ: ವಿಮೆ ಹಣಕ್ಕಾಗಿ ಮಾವನ ಹತ್ಯೆಗೈದ ಸೋದರಳಿಯ!

Davanagere ತೆಲುಗು ಸಿನಿಮಾದಿಂದ ಪ್ರೇರಣೆ: ವಿಮೆ ಹಣಕ್ಕಾಗಿ ಮಾವನ ಹತ್ಯೆಗೈದ ಸೋದರಳಿಯ!

ವಿಮೆ ಹಣಕ್ಕಾಗಿ ಕೊಲೆ ಮಾಡುವ ನಾಯಕನ ತೆಲುಗು ಸಿನಿಮಾದಿಂದ ಸ್ಫೂರ್ತಿ ಪಡೆದ ಸೋದರ ಅಳಿಯ ಸ್ನೇಹಿತರ ಜೊತೆಗೂಡಿ ವಿಮೆ ಹಣಕ್ಕಾಗಿ ಮಾವನನ್ನು ಸ್ನೇಹಿತರ ಜೊತೆಗೂಡಿ ಹತ್ಯೆ ಮಾಡಿದ ಘಟನೆ ದಾವಣೆಗೆರೆಯಲ್ಲಿ ನಡೆದಿದೆ

ಇಮಾಮ್ ನಗರದಲ್ಲಿ ದುಗ್ಗೇಶ್ (32) ಹತ್ಯೆಯಾಗಿದ್ದು, ಸೋದರ ಅಳಿಯ ಗಣೇಶ (24) ಮತ್ತು ಸ್ನೇಹಿತರಾದ ಅನಿಲ (18), ಶಿವಕುಮಾರ್ (25) ಮತ್ತು ಮಾರುತಿ (24) ಕೊಲೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮೃತ ದುರ್ಗೇಶ್​ ಖಾಸಗಿ ಬಸ್ ನಿಲ್ದಾಣ ಬಳಿ ಹಣ್ಣು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಮದ್ಯವ್ಯಸನಿ ಆಗಿದ್ದ. ಕುಡಿತದಿಂದ ಅಶಕ್ತನಾಗಿದ್ದ ದುರ್ಗೆಶ್ ವರ್ಷದಲ್ಲಿ ಸಾಯಬಹುದು ಎಂದು ಭಾವಿಸಿ ಆತನ ಹೆಸರಿನಲ್ಲಿ ಗಣೇಶ್ 40 ಲಕ್ಷ ರೂ. ವಿಮೆ ಮಾಡಿಸಿದ್ದು, 2 ಲಕ್ಷ ರೂ. ಕಂತು ತುಂಬಿದ್ದ.

ವಿಮೆ ಮಾಡಿಸಿ ಒಂದು ವರ್ಷವಾದರೂ ದುಗ್ಗೇಶ್ ಸಾಯದೇ ಇದ್ದಾಗ 2 ಲಕ್ಷ ರೂ. ವ್ಯರ್ಥವಾಗುತ್ತದೆ ಎಂದು ಹೆದರಿದ  ಗಣೇಶ್​ ಸ್ನೇಹಿತರ ಜೊತೆ ನಗರದ ಹೊರವಲಯದಲ್ಲಿ ದುಗ್ಗೇಶ್ ಮುಖ ಮತ್ತು ದೇಹದ ಇತರೆಡೆ ಹಲ್ಲಿ ಮಾಡಿ ಟವೆಲ್​ನಿಂದ ಉಸಿರು ಬಿಗಿದು ಹತ್ಯೆ ಮಾಡಿದ್ದಾರೆ.

ಹತ್ಯೆ ನಂತರ ಲಿಂಗೇಶ್ವರ ದೇವಸ್ಥಾನ ಬಳಿ ಶವ ಎಸೆದು ಹೋಗಿದ್ದ ಆರೋಪಿಗಳು ನಂತರ ಅನುಮಾನಗೊಂಡು ಅಪರಿಚಿತರಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಳಿಕ ದುಗ್ಗೇಶ್ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ತಂದು ಹೊಸ ಕತೆ ಕಟ್ಟಿದ್ದಾರೆ. ಯಾರೋ ಹೊಡೆದು ಬಿಸಾಕಿ ಹೋಗಿದ್ದರು ಎಂದಿದ್ದಾರೆ. ಆದರೆ ಅನುಮಾನಗೊಂಡ ಆಜಾದ್ ನಗರ ಠಾಣಾ ಪೊಲೀಸರು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ಗಣೇಶ್​ ಸತ್ಯ ಬಾಯ್ಬಿಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments