ಅಮೆರಿಕದ ದೂರಗಾಮಿ ಖಂಡಾಂತರ ಕ್ಷಿಪಣಿ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ ಉಕ್ರೇನ್ ರಷ್ಯಾ ಮೇಲೆ ಮೊದಲ ಬಾರಿ ಭಾರೀ ಪ್ರಮಾಣದ ದಾಳಿ ನಡೆಸಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ 1000 ದಿನಗಳು ಪೂರೈಸಿದ ಬೆನ್ನಲ್ಲೇ ಅಮೆರಿಕ ನಿರ್ಗಮಿತ ಅಧ್ಯಕ್ಷ ಜೋ ಬಿಡೈನ್ ಅನುಮತಿ ನೀಡಿದ ಬೆನ್ನಲ್ಲೇ ಎಟಿಎಸಿಎಂಎಸ್ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ.
ಉಕ್ರೇನ್ ಗಡಿಯಿಂದ 130 ಕಿ.ಮೀ. ದೂರದಲ್ಲಿರುವ ರಷ್ಯಾದ ಬ್ರೈಸ್ನಕ್ ವಲಯದ ಸೇನಾ ಮೂಲಸೌಕರ್ಯದ ಪ್ರದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ರಷ್ಯಾ ಪ್ರದೇಶದ ಮೇಲೆ ನಡೆಸಿದ ಮೊದಲ ದಾಳಿ ಇದಾಗಿದ್ದು, ಯಶಸ್ವಿಯಾಗಿದೆ ಎಂದು ಉಕ್ರೇನ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕ ಖಂಡಾಂತರ ಕ್ಷಿಪಣಿ ಬಳಕೆಗೆ ಉಕ್ರೇನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪರಮಾಣು ಶಸ್ತ್ರಗಳ ಸಿದ್ಧತೆ ಆರಂಭಿಸುವುದಾಗಿ ಘೋಷಿಸಿದ್ದರು.
ಪರಮಾಣು ರಹಿತ ದೇಶಗಳ ಮೇಲೆ ಪರಮಾಣು ದಾಳಿ ಮಾಡಬಾರದು ಎಂಬ ನಿಯಮ ಹೊಂದಿದ್ದೆವು. ಆದರೆ ಪರಮಾಣು ಹೊಂದಿದ ದೇಶ ಬೆಂಬಲ ನೀಡಿದ್ದರಿಂದ ನಾವು ಆ ಬೇಲಿಯನ್ನು ದಾಟಲು ಸಿದ್ಧವಾಗಿದ್ದೇನೆ. ನಾವು ಈಗ ಎಲ್ಲಾ ರೀತಿಯ ದಾಳಿ ಸಜ್ಜಾಗುತ್ತಿದ್ದೇವೆ. ಇದರ ಪರಿಣಾಮ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದರು.