Saturday, November 23, 2024
Google search engine
Homeತಾಜಾ ಸುದ್ದಿಮಹಾರಾಷ್ಟ್ರ ಎನ್ ಡಿಎ ಪಾಲು, ಜಾರ್ಖಂಡ್‌ ನಲ್ಲಿ ಇಂಡಿಯಾ ಗೆಲುವು!

ಮಹಾರಾಷ್ಟ್ರ ಎನ್ ಡಿಎ ಪಾಲು, ಜಾರ್ಖಂಡ್‌ ನಲ್ಲಿ ಇಂಡಿಯಾ ಗೆಲುವು!

ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳಲ್ಲಿ ಎನ್ ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳು ತಲಾ ಒಂದರಲ್ಲಿ ಜಯ ಸಾಧಿಸಿ ಸಮಬಲ ಸಾಧಿಸಿವೆ.

ನವೆಂಬರ್ ೨೦ರಂದು ನಡೆದ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಮೀಕ್ಷಾ ವರದಿಗಳು ಸುಳ್ಳಾಗಿವೆ. ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಎನ್ ಡಿಎ ಮೈತ್ರಿಕೂಟ 150ರಿಂದ 170 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿತ್ತು. ಜಾರ್ಖಂಡ್ ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿತ್ತು.

ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್ ಡಿಎ 233 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಕಾರ ಹಿಡಿದರೆ, ಇಂಡಿಯಾ ಮೈತ್ರಿಕೂಟ 50 ಸ್ಥಾನ ಗೆದ್ದು ಭ್ರಮನಿರಸನಕ್ಕೆ ಒಳಗಾಗಿದೆ.

2019ರಲ್ಲಿ ಎನ್ ಡಿಎ 187 ಸ್ಥಾನಗಳಲ್ಲಿ ಗೆದ್ದಿದ್ದು, ಈ ಬಾರಿ ಸುಮಾರು 40 ಸ್ಥಾನ ಹೆಚ್ಚು ಅಂದರೆ 233 ಸ್ಥಾನ ಗೆದ್ದು ಪೂರ್ಣ ಪ್ರಾಬಲ್ಯ ಮೆರೆದಿದೆ. 72 ಸ್ಥಾನಗಳಲ್ಲಿ ಗೆದ್ದಿದ್ದ ಇಂಡಿಯಾ ಮೈತ್ರಿಕೂಟ 50ಕ್ಕೆ ಕುಸಿದಿದೆ.

ಬಿಜೆಪಿ ಈ ಬಾರಿ ೧೪೯ ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 132ರಲ್ಲಿ ಗೆಲುವು ಕಂಡಿದ್ದರೆ, 81 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 55 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಅಜಿತ್ ಪವಾರ್ ಸಾರಥ್ಯದ ಎನ್ ಸಿಪಿ ೫೯ ಸ್ಥಾನಗಳ ಪೈಕಿ 41 ರಲ್ಲಿ ಜಯ ಸಾಧಿಸಿದೆ.

2019ರಲ್ಲಿ 44 ಸ್ಥಾನಗಳಲ್ಲಿ ಗೆಲುವು ಕಂಡಿದ್ದ ಕಾಂಗ್ರೆಸ್ 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 16ರಲ್ಲಿ ಮಾತ್ರ ಗೆಲುವು ಕಂಡಿದೆ. ಉದ್ಧವ್ ಠಾಕ್ರೆ ಸಾರಥ್ಯದ ಶಿವಸೇನೆ 95 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದು, 21ರಲ್ಲಿ ಮಾತ್ರ ಜಯ ಸಾಧಿಸಿದೆ. ಶರದ್ ಪವಾರ್ ಬಣದ ಎನ್ ಸಿಪಿ 86 ಸ್ಥಾನಗಳ ಪೈಕಿ 10ರಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ.

ಜಾರ್ಖಂಡ್ ನಲ್ಲಿ 81 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 51 ಸ್ಥಾನಗಳಲ್ಲಿ ಜಯ ಸಾಧಿಸಿ ಸ್ಪಷ್ಟ ಬಹುಮತದೊಂದಿಗೆ ಜಯ ಸಾಧಿಸಿದರೆ, ಬಿಜೆಪಿ ನೇತೃತ್ವದ ಎನ್ ಡಿಎ 24 ಸ್ಥಾನಗಳಿಗೆ ಕುಸಿದಿದೆ. ಈ ಮೂಲಕ ಶಿಬು ಸೊರೆನ್ ಜೈಲಿಗೆ ಹೋಗಿ ಬಂದ ನಂತರ ಮತ್ತೊಮ್ಮೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments