Home ಕ್ರೀಡೆ 83 ಎಸೆತದಲ್ಲಿ 43 ರನ್ ಗೆ ಆಲೌಟ್: ಟೆಸ್ಟ್ ಕ್ರಿಕೆಟ್ ಲಂಕಾ ಕಳಪೆ ದಾಖಲೆ!

83 ಎಸೆತದಲ್ಲಿ 43 ರನ್ ಗೆ ಆಲೌಟ್: ಟೆಸ್ಟ್ ಕ್ರಿಕೆಟ್ ಲಂಕಾ ಕಳಪೆ ದಾಖಲೆ!

ಮಧ್ಯಮ ವೇಗಿ ಮಾರ್ಕೊ ಜಾನ್ಸನ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 42 ರನ್ ಗಳ ಕಳಪೆ ಮೊತ್ತಕ್ಕೆ ಔಟಾಗಿ ದಾಖಲೆ ಬರೆದಿದೆ.

by Editor
0 comments
srilanka

ಮಧ್ಯಮ ವೇಗಿ ಮಾರ್ಕೊ ಜಾನ್ಸನ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 42 ರನ್ ಗಳ ಕಳಪೆ ಮೊತ್ತಕ್ಕೆ ಔಟಾಗಿ ದಾಖಲೆ ಬರೆದಿದೆ.

ಡರ್ಬಾನ್ ನ ಕಿಂಗ್ಸ್ ಮೇಡ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಗುರುವಾರ ದಕ್ಷಿಣ ಆಫ್ರಿಕಾ 191 ರನ್ ಗೆ ಆಲೌಟ್ ಮಾಡಿದ ನಂತರ ಮೊದಲ ಇನಿಂಗ್ಸ್ ಆಡಲಿಳಿದ ಶ್ರೀಲಂಕಾ ತಂಡ ಕೇವಲ 83 ಎಸೆತಗಳಲ್ಲಿ 43 ರನ್ ಗೆ ಪತನಗೊಂಡಿದೆ.

ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಶ್ರೀಲಂಕಾ ದಾಖಲಿಸಿದ ಅತ್ಯಂತ ಕಳಪೆ ಮೊತ್ತವಾಗಿದೆ. ಮತ್ತು ಅತ್ಯಂತ ಕಡಿಮೆ ಸಮಯ ಅಥವಾ ಎಸೆತಗಳಲ್ಲಿ ಆಲೌಟ್ ಆದ ಕುಖ್ಯಾತಿಗೆ ಪಾತ್ರವಾಯಿತು.

ಶ್ರೀಲಂಕಾ ತಂಡ 1974ರಲ್ಲಿ ಪಾಕಿಸ್ತಾನದ ಕ್ಯಾಂಡಿಯಲ್ಲಿ 71 ರನ್ ಗೆ ಆಲೌಟಾಗಿದ್ದು ಇದುವರೆಗಿನ ಕಳಪೆ ಸಾಧನೆಯಾಗಿತ್ತು. ಒಟ್ಟಾರೆಯಾಗಿ ಶ್ರೀಲಂಕಾದ 2ನೇ ಅಲ್ಪ ಮೊತ್ತವಾಗಿದೆ. 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್ ಗೆ ಆಲೌಟಾಗಿತ್ತು.

banner

ಜಾನ್ಸನ್ 6.5 ಓವರ್ ಗಳಲ್ಲಿ 13 ರನ್ ಗೆ 7 ವಿಕೆಟ್ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದರು. ಶ್ರೀಲಂಕಾ ಪರ ಕಮಿಂಡು ಮೆಂಡಿಸ್ (13), ಲಹಿರು ಕುಮಾರ (10) ಮಾತ್ರ ಎರಡಂಕಿ ಮಾತ್ರ ದಾಟಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಲಂಡನ್ ವಾಲ್ವ್ಸ್ 2024ರಲ್ಲಿ ಮಿಂಚಿದ ಭಾರತ 83 ಎಸೆತದಲ್ಲಿ 43 ರನ್ ಗೆ ಆಲೌಟ್: ಟೆಸ್ಟ್ ಕ್ರಿಕೆಟ್ ಲಂಕಾ ಕಳಪೆ ದಾಖಲೆ! ಐಪಿಎಲ್ ಹರಾಜು ಫಿಕ್ಸ್: ಸಿಎಸ್ ಕೆ ವಿರುದ್ಧ ಲಲಿತ್ ಮೋದಿ ಮ್ಯಾಚ್ ಫಿಕ್ಸಿಂಗ್ ಆರೋಪ ಶನಿವಾರ ತಮಿಳುನಾಡಿಗೆ ಅಪ್ಪಳಿಸಲಿರುವ ಚಂಡಮಾರುತ: ಹಲವೆಡೆ ಕಟ್ಟೆಚ್ಚರ Loksabha ವಿವಾದಿತ ವಕ್ಫ್ ಮಸೂದೆ ಮಂಡನೆ ಮತ್ತೆ ಮುಂದೂಡಿಕೆ ಎಐ ಪ್ರಭಾವ, ಶೇ.38ರಷ್ಟು ಐಐಟಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ನೌಕರಿ! 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸಿದ ಆಸ್ಟ್ರೇಲಿಯಾ ಸರ್ಕಾರ! ಕದನವಿರಾಮ ಬೆನ್ನಲ್ಲೇ ಹಿಜಾಬುಲ್ಲಾ ಮೇಲೆ ಇಸ್ರೇಲ್ ದಾಳಿ: ಮೂಲಸೌಕರ್ಯ ಧ್ವಂಸ! ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಮತ್ತೆ ಮನವಿ: ರಾಜ್ಯ ಸಚಿವ ಸಂಪುಟ ತೀರ್ಮಾನ ISKCON ಇಸ್ಕಾನ್ ನಿಷೇಧ ಸಾಧ್ಯವಿಲ್ಲ: ಅರ್ಜಿ ವಜಾಗೊಳಿಸಿ ಬಾಂಗ್ಲಾದೇಶ ಹೈಕೋರ್ಟ್ ಮಹತ್ವದ ತೀರ್ಪು!