Home ರಾಜ್ಯ ಬೆಂಗಳೂರಿನಲ್ಲಿ ಟೆಸ್ಕೊ ವಿತರಣಾ ಕೇಂದ್ರ ಸ್ಥಾಪನೆ: 16,500 ಉದ್ಯೋಗ ಸೃಷ್ಟಿ: ಸಚಿವ ಎಂಬಿ ಪಾಟೀಲ

ಬೆಂಗಳೂರಿನಲ್ಲಿ ಟೆಸ್ಕೊ ವಿತರಣಾ ಕೇಂದ್ರ ಸ್ಥಾಪನೆ: 16,500 ಉದ್ಯೋಗ ಸೃಷ್ಟಿ: ಸಚಿವ ಎಂಬಿ ಪಾಟೀಲ

ಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸಲು ಮತ್ತು ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪಿಸಲು ಟೆಸ್ಕೊ ಉದ್ದೇಶಿಸಿದ್ದು, ಇದರಿಂದ 16,500 ಉದ್ಯೋಗಗಳು ಸೃಷ್ಟಿಯಾಗಲಿವೆ

by Editor
0 comments
invest karnataka

ಲಂಡನ್: ʼಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸಲು ಮತ್ತು ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪಿಸಲು ಟೆಸ್ಕೊ ಉದ್ದೇಶಿಸಿದ್ದು, ಇದರಿಂದ 16,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಇನ್ವೆಸ್ಟ್ ಕರ್ನಾಟಕದ ಅಂತಾರಾಷ್ಟ್ರೀಯ ರೋಡ್ಷೋದ ಭಾಗವಾಗಿ ಲಂಡನ್ನಲ್ಲಿ 2ನೇ ಪ್ರವಾಸದ ವೇಳೆ ರೋಲ್ಸ್ ರಾಯ್ಸ್, ಮೆಗೆಲ್ಲನ್ ಏರೋಸ್ಪೇಸ್, ಟೆಸ್ಕೊ ಮತ್ತು ಪಿಯರ್ಸನ್ ಕಂಪನಿಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದ ನಂತರ ಈ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ತನ್ನ ವಹಿವಾಟು ವಿಸ್ತರಿಸಲು 1,500 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿರುವ ಟೆಸ್ಕೊ ಗ್ರೂಪ್, ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪಿಸಲಿದೆ. ಇದರಿಂದ 16,500 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಕರ್ನಾಟಕದ ವೈಮಾಂತರಿಕ್ಷ- ರಕ್ಷಣೆ, ವಾಹನ ತಯಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಸಚಿವರು ಇಂಗ್ಲೆಂಡ್ನ ಉನ್ನತ ಜಾಗತಿಕ ಕಂಪನಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯದಲ್ಲಿನ ಸದೃಢ ಮೂಲಸೌಲಭ್ಯ, ಉದ್ಯಮ ಪೂರಕ ವಾತಾವರಣ ಮತ್ತು ʼಕ್ವಿನ್ ಸಿಟಿʼ ಯೋಜನೆಗಳಂತಹ ದೂರದೃಷ್ಟಿಯ ಉಪಕ್ರಮಗಳನ್ನು ಪರಿಚಯಿಸಿದ್ದಾರೆ.

banner

ರೋಲ್ಸ್ ರಾಯ್ಸ್ ಗ್ರೂಪ್ ಜೊತೆಗಿನ ಸಭೆಯಲ್ಲಿ ಸಚಿವ ಪಾಟೀಲ ಅವರು ಏರೋಸ್ಪೇಸ್ ಮತ್ತು ರಕ್ಷಣೆ ವಲಯದಲ್ಲಿ ಕರ್ನಾಟಕದಲ್ಲಿ ಲಭ್ಯ ಇರುವ ಅವಕಾಶಗಳನ್ನು ಪರಿಚಯಿಸಿದರು. ಕಂಪನಿಯ ನಾಯಕತ್ವವು ಮೆಚ್ಚುಗೆ ಸೂಚಿಸಿದೆ.
ಇಂಗ್ಲೆಂಡ್ನ ಪ್ರಮುಖ ಶೈಕ್ಷಣಿಕ ಕಂಪನಿಯಾಗಿರುವ ಪಿಯರ್ಸನ್ ಗ್ರೂಪ್, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಲಿಕೆಯ ಪರಿಹಾರಗಳನ್ನು ಮತ್ತು ಪಾಲುದಾರಿಕೆಗಳನ್ನು ಬಲಪಡಿಸುವ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದೆ.

ಕರ್ನಾಟಕಕ್ಕೆ ಸಂಬಂಧಿಸಿದ ಕಂಪನಿಯ ಬದ್ಧತೆಯನ್ನು ಮೆಗೆಲ್ಲನ್ ಏರೊಸ್ಪೇಸ್ ಪುನರುಚ್ಚರಿಸಿದೆ. ಜಾಗತಿಕ ವೈಮಾಂತರಿಕ್ಷ ಕೇಂದ್ರವಾಗಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿರುವ ಕಂಪನಿಯ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.  ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ  ಗುಂಜನ್ ಕೃಷ್ಣ  ಉದ್ಯಮಿಗಳ ಜೊತೆಗಿನ ಸಮಾಲೋಚನೆಗಳಲ್ಲಿ ಭಾಗವಹಿಸಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಸಿಲಿಂಡರ್ ಸ್ಫೋಟ: ಮೃತ ಅಯ್ಯಪ್ಪ ಮಾಲಾಧಾರಿಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ Virat kohli ನಿಷೇಧದಿಂದ ಪಾರಾದ ವಿರಾಟ್ ಕೊಹ್ಲಿ: ಭಾರೀ ದಂಡ ವಿಧಿಸಿದ ಐಸಿಸಿ ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯಾಗೆ ನಾಲ್ವರು ಅರ್ಧಶತಕದ ಬಲ; ಬುಮ್ರಾ ಹೋರಾಟ! ವಿವಾದಗಳಿಂದ ಬೇಸರ: ಚಿತ್ರರಂಗ ತೊರೆಯಲು ಪುಷ್ಪ-2 ನಿರ್ದೇಶಕ ಸುಕುಮಾರ್ ನಿರ್ಧಾರ! ಮಾತುಮಾತಿಗೆ ರೇಗುವ ಬೈಯ್ಯುತ್ತಿರಾ? ಹಾಗಾದರೆ ನಿಮ್ಮನ್ನು ಕಾಡುತ್ತಿರುವ ‘ಜಿದ್ದುಗೇಡಿತನ’ ಮಾನಸಿಕ ಸಮಸ್ಯೆ ಬಗ್ಗೆ ತಿಳಿ... 7ನೇ ಮದುವೆ ಆಗುವಾಗ ಸಿಕ್ಕಿಬಿದ್ದ ಚಾಲಕಿ ಮಹಿಳೆಯರ ಗ್ಯಾಂಗ್! ಕಾಲ್ತುಳಿತದಲ್ಲಿ ಮೃತ ಕುಟಂಬಕ್ಕೆ 2 ಕೋಟಿ ರೂ. ಪರಿಹಾರ: ಅಲ್ಲು ಅರ್ಜುನ್ ತಂದೆ ಘೋಷಣೆ ಕಜಕಿಸ್ತಾನದಲ್ಲಿ ಭೀಕರ ವಿಮಾನ ಪತನ: 37 ಮಂದಿ ಸಾವು, 22 ಪ್ರಯಾಣಿಕರ ರಕ್ಷಣೆ ಹಾವೇರಿಯಲ್ಲಿ ಭೀಕರ ಕಾರು ಅಪಘಾತ: ಬೆಂಗಳೂರಿನ ಒಂದೇ ಕುಟುಂಬದ ನಾಲ್ವರ ದುರ್ಮರಣ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಯಶಸ್ವಿ: 6 ಗಂಟೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೇಳಿದ್ದೇನು?