ಬಂಡುಕೋರರು ಏಕಾಏಕಿ ಅಂತರ್ಯುದ್ಧ ಘೋಷಿಸಿದ ಬೆನ್ನಲ್ಲೇ ದಾಳಿ ಆರಂಭಿಸಿ ಸಿರಿಯಾದ ಎರಡು ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದೆ.
ದೇಶ ತೊರೆಯುವಂತೆ ಭಾರತೀಯರಿಗೆ ಸಿರಿಯಾ ವಿದೇಶಾಂಗ ಸೂಚನೆ ನೀಡಿದ ಬೆನ್ನಲ್ಲೇ ಬಂಡುಕೋರರು ದಾಳಿ ನಡೆಸಿದ್ದು, ಸಿರಿಯಾ ಸೇನೆಯನ್ನು ಹಿಮ್ಮೆಟಿಸಿ ಡಾರಾ ಮತ್ತು ಅಲೊಪ್ಪೊ ನಗರಗಳನ್ನು ವಶಪಡಿಸಿಕೊಂಡಿದೆ.
ಸಿರಿಯಾ ಅಧ್ಯಕ್ಷ ಬಾಷರ್ ಅಲ್-ಅಸ್ಸಾದ್ ತೀವ್ರ ಮುಖಭಂಗಕ್ಕೆ ಒಳಗಾಗಿದ್ದು, 2011ರ ದಂಗೆಯ ಜನ್ಮಸ್ಥಳ ಎಂದು ಗುರುತಿಸಲಾದ ಡಾರಾ ನಗರವನ್ನು ಬಂಡುಕೋರರು ವಶಪಡಿಸಿಕೊಂಡಿದ್ದಾರೆ.
ರಾಜಧಾನಿ ಡಮಾಸ್ಕಸ್ ನಿಂದ ೧೦೦ ಕಿ.ಮೀ.ದೂರದಲ್ಲಿರುವ ಡಾರಾ ನಗರವು 2011ರಲ್ಲಿ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಅಸ್ಸಾದ್ ಸರ್ಕಾರದ ಆಡಳಿತ ವಿರೋಧಿ ನೀಡಿ ಖಂಡಿಸಿ ಭಿತ್ತಿ ಪತ್ರ ಹಂಚಿದ ಹುಡುಗರನ್ನು ಚಿತ್ರಹಿಂಸೆಗೆ ಗುರಿ ಮಾಡಲಾಗಿದ್ದು ಸ್ಥಳೀಯರನ್ನು ಕೆರಳಿಸಿತ್ತು. ಈ ಹೋರಾಟ ಧಂಗೆಯಾಗಿ ಬದಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ನಡೆದ ದಾಳಿ-ಪ್ರತಿದಾಳಿಯಲ್ಲಿ ೫ ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.