ಮದುವೆ ಆಗಿ ಎರಡು ಮಕ್ಕಳಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಆಗಿದ್ದ ವ್ಯಕ್ತಿ ಜೊತೆ ಸಲುಗೆ ಬೆಳೆಸಿಕೊಂಡಿದ್ದಕ್ಕೆ ಗೃಹಿಣಿ ಜೀವನನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಇನ್ ಸ್ಟಾಗ್ರಾಂನಲ್ಲಿ ಪರಿಚಯ ಅದ ಚಿತ್ರದುರ್ಗ ಜಿಲ್ಲೆಯ ಚನ್ನಗಿರಿ ಮೂಲದ ಚಿರಂಜೀವಿ ಎಂಬಾತನಿಂದ ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ತೃಪ್ತಿ ಕೊಲೆಯಾಗಿದ್ದಾಳೆ.
ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಚಿರಂಜೀವಿ ಮತ್ತು ತೃಪ್ತಿ ಇನ್ ಸ್ಟಾಗ್ರಾಂನಲ್ಲಿ ಪರಿಚಯ ಆಗಿದೆ. ಕೆಲವು ತಿಂಗಳು ಪರಸ್ಪರ ಮಾತುಕತೆ ನಡೆಸಿದ ನಂತರ ಸ್ನೇಹ ಪ್ರೀತಿಗೆ ತಿರುಗಿದ್ದು, ಇಬ್ಬರೂ ಮೊಬೈಲ್ ನಂಬರ್ ಬದಲಿಸಿಕೊಂಡಿದ್ದಾರೆ.
ತಿಂಗಳ ಹಿಂದೆ ಚಿರಂಜೀವಿ ಜೊತೆ ತೃಪ್ತಿ ಮನೆ ಬಿಟ್ಟು ಹೋಗಿದ್ದಳು. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಂತರ ವಾಪಸ್ ಬಂದ ತೃಪ್ತಿ ಮನೆಯವರ ಒತ್ತಾಯಕ್ಕೆ ಮಣಿದು ಚಿರಂಜೀವಿ ಜೊತೆ ಸಂಪರ್ಕ ಕಡಿದುಕೊಂಡಿದ್ದಳು.
ತೃಪ್ತಿ ಮಾತು ಬಿಟ್ಟಿದ್ದರಿಂದ ಕೋಪಗಿಂಡ ಚಿರಂಜೀವಿ ಶನಿವಾರ ಏಕಾಏಕಿ ತೃಪ್ತಿ ಮನಗೆ ನುಗ್ಗಿ ಎರಡು ಮಕ್ಕಳ ಮುಂದೆಯೇ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಅರ್ಧ ಕಿಲೋ ಮೀಟರ್ ದೂರ ಆಕೆಯನ್ನ ಕಾಫಿ ತೋಟದ ನಡುವೆ ಎಳೆದು ತಂದು 40 ಅಡಿ ಆಳವಿರುವ ಕೆರೆಯಲ್ಲಿ ಹಾಕಿದ್ದಾನೆ ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ಈ ಕೃತ್ಯ ಎಸಗಿದ್ದಾನೆ.
ಚಿಕ್ಕಮಗಳೂರು ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಚಿರಂಜೀವಿಯನ್ನು ಬಂಧಿಸಿದ್ದಾರೆ.