Thursday, May 2, 2024
Google search engine
Homeತಾಜಾ ಸುದ್ದಿಲೋಕಸಭಾ ಚುನಾವಣೆ: ಮೊದಲ ಹಂತದಲ್ಲಿ ಶೇ.60ರಷ್ಟು ಮತದಾನ

ಲೋಕಸಭಾ ಚುನಾವಣೆ: ಮೊದಲ ಹಂತದಲ್ಲಿ ಶೇ.60ರಷ್ಟು ಮತದಾನ

ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ ಬಹುತೇಕ ಮುಕ್ತಾಯಗೊಂಡಿದ್ದು, ಶೇ.60ರಷ್ಟು ಮತದಾನವಾಗಿದೆ.

ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ, ಮಣಿಪುರ, ಪಶ್ಚಿಮ ಬಂಗಾಳ ಸೇರಿದಂತೆ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಶುಕ್ರವಾರ ಮತದಾನವಾಯಿತು.

ದೇಶಾದ್ಯಂತ ಸಂಜೆ 6 ಗಂಟೆಯವರೆಗೆ ಶೇ.59.71ರಷ್ಟು ಮತದಾನವಾಗಿದ್ದು, ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂತಿಮ ವಿವರ ಇನ್ನಷ್ಟೇ ಬರಬೇಕಿದೆ. 2019 ಶೇ.69.43ರಷ್ಟು ಮತದಾನಕ್ಕೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ.

ಸಂಜೆ 6 ಗಂಟೆಯವರೆಗೆ ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಶೇ.77.57ರಷ್ಟು ಮತದಾನವಾಗಿದೆ. ಮಣಿಪುರದಲ್ಲಿ ಶೇ.67.46ರಷ್ಟು ಮತದಾನ ದಾಖಲಾಗಿದೆ. ತ್ರಿಪುರದಲ್ಲಿ ಶೇ.76.10, ಪುದುಚೇರಿಯಲ್ಲಿ ಶೇ.72.84, ಅಸ್ಸಾಂನಲ್ಲಿ ಶೇ.70.77, ತಮಿಳುನಾಡಿನಲ್ಲಿ ಶೇ.62.08ರಷ್ಟು ಮತದಾನ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments