ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ-2 ಚಿತ್ರ ಬಿಡುಗಡೆ ಆದ 7 ದಿನದಲ್ಲಿ 1000 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
ಪುಷ್ಪ-2 ಚಿತ್ರ ಭರ್ಜರಿ ಆರಂಭ ಪಡೆದರೂ 5 ದಿನದ ನಂತರ ಗಳಿಕೆಯಲ್ಲಿ ಕುಸಿತ ಕಂಡಿದ್ದರೂ 1000 ಕೋಟಿ ರೂ. ಕ್ಲಬ್ ಸೇರಿದೆ. ಈ ಮೂಲಕ ಪುಷ್ಪ-2 ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಳೆದೆರಡು ದಿನಗಳಲ್ಲಿ ತೆಲುಗಿನಲ್ಲಿ 42 ಕೋಟಿ ಸಂಗ್ರಹಿಸಿರುವ ಪುಷ್ಪ-2, ಹಿಂದಿಯಲ್ಲಿ 30, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ತಲಾ 2 ಕೋಟಿ ಸಂಗ್ರಹಿಸುವ ಮೂಲಕ ಭಾರತದಲ್ಲಿ ಒಟ್ಟಾರೆ 682 ಕೋಟಿ ರೂ. ಸಂಗ್ರಹಿಸಿದೆ, ಜಾಗತಿಕ ಮಟ್ಟದಲ್ಲಿ ಸೇರಿದಂತೆ ಒಟ್ಟಾರೆ 1025 ಕೋಟಿ ರೂ. ಗಳಿಸಿ ಹೊಸ ದಾಖಲೆ ಬರೆದಿದೆ.
ಭರ್ಜರಿ ಓಪನಿಂಗ್ ಪಡೆದು ಮೊದಲ ವಾರದ ಗಳಿಕೆಯಲ್ಲಿ ದಾಖಲೆ ಬರೆದಿದ್ದ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ದಾಖಲೆಯನ್ನು ಪುಷ್ಪ-2 ಮುರಿದಿದೆ. ಈಗಾಗಲೇ ಜವಾನ್ ಮುಂತಾದ ಚಿತ್ರಗಳ ಒಟ್ಟಾರೆ ಗಳಿಕೆಯ ದಾಖಲೆಯನ್ನು ಕೂಡ ಪುಷ್ಪ-2 ಮುರಿದಿದೆ.