ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಡಿಸೆಂಬರ್ 26ರಂದು ಇಡೀ ದಿನ ಬೆಳಗಾವಿಯಲ್ಲಿ ತಂಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾತೋತ್ಸವ ಸಮಾರಂಭದ ಪೂರ್ವಭಾವಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಕುಟುಂಬ ತಂಗಲಿರುವ ವಿಷಯ ಹೇಳಿದರು.
ನೂರು ವರ್ಷದ ಇತಿಹಾಸಕ್ಕೆ ಸಮಾವೇಶ ಸಾಕ್ಷಿಯಾಗಲಿದೆ. ಈ ಸಮಾವೇಶಕ್ಕೆ 15೦ ಸಂಸದರು, 40 ಬಿಸಿಸಿ ಅಧ್ಯಕ್ಷರು, ಕಾಂಗ್ರೆಸ್ ಸಿಎಂಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಡಿಸೆಂಬರ್ 26ರಂದು ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದೆ. ಮಾರನೇ ದಿನ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಇದೆ. ಕಾಂಗ್ರೆಸ್ ನಿಂತ ನಿಂತವರು ಗೆದ್ದವರು ಸೋತವರು ಸೇರಿದಂತೆ ಎಲ್ಲರೂ ಸಹ ಈ ಸಮಾವೇಶದಲ್ಲಿ ಸೇರಲಿದ್ದು, ಐತಿಹಾಸಿಕ ಸಮಾವೇಶವಾಗಲಿದೆ ಎಂದು ಅವರು ನುಡಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ನೂರು ಕಡೆ ಕಾಂಗ್ರೇಸ್ ಕಚೇರಿಯನ್ನು ಉದ್ಘಾಟನೆ ಮಾಡಬೇಕು ಎಂದು ಸಿದ್ಧತೆ ಆಗಿದೆ. ಸೋಮವಾರ ಅಥವಾ ಮಂಗಳವಾರ ವೇಣುಗೋಪಾಲ್ ಹಾಗೂ ಸುರ್ಜೇವಾಲ ಬರ್ತಿದ್ದಾರೆ. ನಮಗೆ ಅವರು ಮಾರ್ಗದರ್ಶನ ಮಾಡುತ್ತಾರೆ ಎಂದು ಅವರು ಹೇಳಿದರು.
ಒಬ್ಬೊಬ್ಬ ಶಾಸಕರಿಗೂ ಸಹ ಒಬ್ಬೊಬ್ಬ ನಾಯಕರುನ್ನು ಕರೆದುಕೊಂಡು ಬರುವ ಜವಾಬ್ದಾರಿ ನೀಡಲಾಗಿದೆ. ಮೈಸೂರು ದಸರಾ ಯಾವ ರೀತಿ ವಿಜೃಂಭಿಸುತ್ತೋ ಅದೇ ರೀತಿ ಲೈಟಿಂಗ್ ವ್ಯವಸ್ಥೆ ಮಾಡುತ್ತೇವೆ. ಒಂದು ಕಡೆ ಸರ್ಕಾರ ಇನ್ನೊಂದು ಕಡೆ ಪಕ್ಷವೂ ಕೆಲಸ ಮಾಡುತ್ತೆ. ಒಂದು ವಾರಗಳ ಕಾಲ ಲೈಟಿಂಗ್ ವ್ಯವಸ್ಥೆಯನ್ನು ಇಡುತ್ತಿದ್ದು, ಜನ ಬಂದು ನೋಡಿಕೊಂಡು ಹೋಗಬಹುದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧೀ ಇಲ್ಲೆ ತಂಗುತ್ತಾರೆ ಎಂದು ಡಿಕೆಶಿ ತಿಳಿಸಿದ್ದಾರೆ.