Home ದೇಶ ಜಾತಿ ಮೀಸಲಾತಿ ತೆಗೆದು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಜಾತಿ ಮೀಸಲಾತಿ ತೆಗೆದು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಜಾತಿ ಆಧಾರದ ಮೇಲೆ ನೀಡುತ್ತಿರುವ ಮೀಸಲಾತಿಯನ್ನು ಮುಂದುವರಿಸಬೇಕೋ ಅಥವಾ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ನೀಡಬೇಕೋ ಎಂಬ ಬಗ್ಗೆ ನಿರ್ಧರಿಸಲು ಇದು ಸೂಕ್ತ ಸಮಯ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

by Editor
0 comments
hd devegowda

ಜಾತಿ ಆಧಾರದ ಮೇಲೆ ನೀಡುತ್ತಿರುವ ಮೀಸಲಾತಿಯನ್ನು ಮುಂದುವರಿಸಬೇಕೋ ಅಥವಾ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ನೀಡಬೇಕೋ ಎಂಬ ಬಗ್ಗೆ ನಿರ್ಧರಿಸಲು ಇದು ಸೂಕ್ತ ಸಮಯ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಸಭೆಯಲ್ಲಿ ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪಯಣ ಕುರಿತ ಚರ್ಚೆಯ ಮೇಲೆ ಮಾತನಾಡಿದ ಅವರು, ಜಾತಿ ಆಧಾರದ ಮೇಲೆ ನೀಡುತ್ತಿರುವ ಮೀಸಲಾತಿ ಮುಂದುವರಿಸಬೇಕೇ ಅಥವಾ ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ಬದಲಾಯಿಸಬೇಕೆ ಎಂಬುದುನ್ನು ತೀರ್ಮಾನಿಸಬೇಕಾಗಿದೆ ಎಂದರು.

ಹಿಂದೆ ಏನಾಗಿತ್ತು? ಯಾವ ಕಾರಣಕ್ಕಾಗಿ ಮೀಸಲಾತಿ ನೀಡಲಾಯಿತು ಎಂಬ ಬಗ್ಗೆ ಸದನವೇ ನಿರ್ಧರಿಸಬೇಕು. ಈ ದೇಶದಲ್ಲಿ ಬಡತನವೇ ಆಧಾರ ಎಂದು ಪರಿಗಣಿಸಬೇಕು. ಹಿಂದೆ ನಾವು ನೀಡಿದ್ದ ಮೀಸಲು ಇದ್ದರೂ ಎರಡು ಚಕ್ಕಡಿ ಊಟಕ್ಕೆ ಪರದಾಡುತ್ತಿರುವ ಜನರನ್ನು ಇನ್ನೂ ಎತ್ತಂಗಡಿ ಮಾಡಿಲ್ಲ ಎಂದು ಅವರು ಹೇಳಿದರು.

ಹಿಂದಿನ ರೀತಿಯಲ್ಲಿಯೇ ಮೀಸಲಾತಿಯನ್ನು ಮುಂದುವರಿಸಬೇಕೇ ಅಥವಾ “ಅತ್ಯಂತ ಬಡತನದಿಂದ ಬಳಲುತ್ತಿರುವವರಿಗೆ ಮಾತ್ರ” ಎಂಬುದನ್ನು ಪರಿಗಣಿಸಬೇಕೇ? ಜನರ ಜೀವನ ಪರಿಸ್ಥಿತಿ ಕೆಟ್ಟದಾಗಿದೆ ಎಂಬುದಕ್ಕೆ ಆದ್ಯತೆ ನೀಡಬೇಕೇ ಎಂದು ಸದನ ಯೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ದೇವೇಗೌಡರು ಅಭಿಪ್ರಾಯಪಟ್ಟರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸ್ಪಿನ್ ದಂತಕತೆ ಆರ್.ಅಶ್ವಿನ್ ನಿವೃತ್ತಿ ಘೋಷಣೆ! ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಕಾರ್ಖಾನೆ ಲಾಭಾಂಶ 108 ಕೋಟಿ ರೂ. ಸರ್ಕಾರಕ್ಕೆ ಹಸ್ತಾಂತರ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಪಾತ್ರರಾದ ಟಿಬಿ ಜಯಚಂದ್ರ! ಒಂದು ದೇಶ, ಒಂದು ಚುನಾವಣೆ: 31 ಸದಸ್ಯರ ಸಂಸದೀಯ ಸಮಿತಿಗೆ 90 ದಿನದ ಗಡುವು! ಐಸಿಯುನಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿಗೆ ಚಿಕಿತ್ಸೆ! ಜಾತಿ ಮೀಸಲಾತಿ ತೆಗೆದು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಜಯೇಂದ್ರ, ನಿರ್ಮಲಾ ಸೀತಾರಾಮ್ ಗೆ ಬಿಗ್ ರಿಲೀಫ್: ಚುನವಣಾ ಬಾಂಡ್ ಹೆಸರಲ್ಲಿ ಸುಲಿಗೆ ಪ್ರಕರಣ ಹೈಕೋರ್ಟ್ ರದ್ದು ಬೆಂಗಳೂರಿಗೆ ಫುಡ್ ಪ್ಯಾಕೆಟಲ್ಲಿ ಬರುತ್ತೆ ಡ್ರಗ್ಸ್: ಅಂಗಡಿಯಲ್ಲಿ 24 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ! ಕಬ್ಬು ಕಟಾವು ಕಾರ್ಮಿಕರಿಗೂ ಕಾರ್ಡ್ ವಿತರಣೆಗೆ ಚಿಂತನೆ: ಸಚಿವ ಸಂತೋಷ್ ಲಾಡ್ ರಾಹುಲ್, ಜಡೇಜಾ ಅರ್ಧಶತಕ: ಕೂದಲೆಳೆ ಅಂತರದಲ್ಲಿ ಫಾಲೋಆನ್ ತಪ್ಪಿಸಿಕೊಂಡ ಭಾರತ