ಜಿಗ್ ಜಾಗ್ ಮಾಡುತ್ತಾ ವೇಗವಾಗಿ ಬಂದ ಸ್ಪೀಡ್ ಬೋಟ್ ನಿಯಂತ್ರಣ ತಪ್ಪಿ 80 ಜನರು ಪ್ರಯಾಣಿಸುತ್ತಿದ್ದ ದೋಣಿಗೆ ಡಿಕ್ಕಿ ಹೊಡೆದಿದ್ದರಿಂದ ಒಬ್ಬರು ಮೃತಪಟ್ಟು, ಇಬ್ಬರು ನಾಪತ್ತೆಯಾಗಿರುವ ಘಟನೆ ಮುಂಬೈ ಸಮೀಪ ಸಂಭವಿಸಿದೆ.
ಮುಂಬೈ ಕರಾವಳಿ ತೀರದಲ್ಲಿ ಬುಧವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ವೇಗವಾಗಿ ಬಂದ ಸ್ಪೀಡ್ ಬೋಟ್ ದೊಡ್ಡ ದೋಣಿಗೆ ಡಿಕ್ಕಿ ಹೊಡೆದಿದೆ.
ನಾಲ್ವರು ಝಿಗ್‌ಜಾಗ್‌ಗಳನ್ನು ಹೊತ್ತ ವೇಗದ ದೋಣಿ ನಿಯಂತ್ರಣ ತಪ್ಪಿ ದೋಣಿಗೆ ಡಿಕ್ಕಿ ಹೊಡೆದಿದ್ದರಿಂದ ದೋಣಿ ಮಗುಚಿಕೊಂಡಿದೆ. 77 ಮಂದಿಯನ್ನು ಕೂಡಲೇ ರಕ್ಷಿಸಲಾಗಿದ್ದು, ಒಬ್ಬ ಮೃತಪಟ್ಟು ಇಬ್ಬರು ನಾಪತ್ತೆಯಾಗಿದ್ದಾರೆ.
ಸ್ಪೀಡ್ ಬೋಟ್ ಡಿಕ್ಕಿ ಹೊಡೆಯುತ್ತಿರುವ ವೀಡಿಯೋವನ್ನು ದೋಣಿಯಲ್ಲಿದ್ದ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ವೈರಲ್ ಆಗಿದೆ.