Tuesday, May 19, 2026
Google search engine
Homeಬೆಂಗಳೂರುರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಪಾಕಿಸ್ತಾನಿಯರು, 159 ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ: ಗೃಹ ಸಚಿವ ಜಿ....

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಪಾಕಿಸ್ತಾನಿಯರು, 159 ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ: ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು ಹಾಗೂ ರಾಜ್ಯದ ನಾನಾ ಕಡೆ ಅಕ್ರಮವಾಗಿ ನೆಲೆಸಿದ್ದ 24 ಪಾಕಿಸ್ತಾನಿಯರು ಮತ್ತು 159 ಬಾಂಗ್ಲಾದೇಶದ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಪ್ರಶ್ನೆಗೆ ಗುರುವಾರ ಉತ್ತರ ನೀಡಿದ ಸಚಿವರು, 115 ಜನ ಬಾಂಗ್ಲಾದೇಶಿಗರು ನಕಲಿ ದಾಖಲೆಗಳ ಮೂಲಕ ವಾಸವಿರುವುದು ಕಂಡುಬಂದಿದೆ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರನ್ನು ಪತ್ತೆ ಹಚ್ಚಲು ಬೆಂಗಳೂರಿನಲ್ಲಿ ವಿಶೇಷ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಅಕ್ರಮವಾಗಿ ಭಾರತದೊಳಗೆ ಬರುತ್ತಿರುವುದು ಹೊಸದೇನಲ್ಲ. ಲಕ್ಷಾಂತರ ಜನ ಭಾರತಕ್ಕೆ ಬರುತ್ತಿದ್ದಾರೆ. ಅವರನ್ನು ತಡೆಗಟ್ಟುವ ಕೆಲಸ ಸೈನಿಕರು ಗಡಿಯಲ್ಲಿ ಮಾಡುತ್ತಿದ್ದಾರೆ. ಆದರೂ ಕಣ್ತಪ್ಪಿಸಿಕೊಂಡು ಕೆಲವರು ನುಸುಳಿಕೊಂಡು ಹೇಗೆ ಭಾರತಕ್ಕೆ ಬರ್ತಾರೆ ಅನ್ನೋದು ಪ್ರಶ್ನೆಯಾಗಿದೆ ಎಂದು ಅವರು ವಿವರಿಸಿದರು.

ಅಕ್ರಮವಾಗಿ ರಾಜ್ಯದಲ್ಲಿ ನೆಲೆಸುವುದನ್ನು ತಡೆಗಟ್ಟುವ ಕೆಲಸ ಪ್ರತಿ ವರ್ಷ ನಾವು ಮಾಡುತ್ತಿದ್ದೇವೆ. ಅನುಮಾನ ಬಂದವರ ದಾಖಲೆ ಪರಿಶೀಲನೆ ಮಾಡುತ್ತಿದ್ದೇವೆ. ಅಕ್ರಮವಾಗಿ ನೆಲೆಸಿರುವವರನ್ನು ಗುರುತಿಸಿ ಗಡಿಪಾರು ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಆಫ್ರಿಕಾದಿಂದ ಬಂದವರು ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ.  ಸ್ಟೂಡೆಂಟ್‌ ವೀಸಾದಲ್ಲಿ ಬಂದು ಡ್ರಗ್ ದಂಧೆ ಮಾಡುತ್ತಿದ್ದಾರೆ. ಈ ರೀತಿ ಅಕ್ರಮವಾಗಿ ಬಂದು ನೆಲೆಸಿರುವವರ ಪತ್ತೆಗೆ ಪ್ರತಿ ಜಿಲ್ಲೆಯಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ನಿರಂತರವಾಗಿ ಅನಧಿಕೃತವಾಗಿ ಬಂದಿರುವ ವಿದೇಶಿ ಪ್ರಜೆಗಳನ್ನ ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ವಿವರ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments