ಪುಷ್ಪ-2 ಚಿತ್ರದ ಬಿಡುಗಡೆ ವೇಳೆ ಸಂಭಸಿದ ಕಾಲ್ತುಳಿತದಲ್ಲಿ ತಾಯಿ ಮೃತಪಟ್ಟು, ಮಗ ಅಸ್ವಸ್ಥಗೊಂಡ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ 2 ಕೋಟಿ ರೂ. ನೀಡಲಾಗುವುದು ಎಂದು ನಟ ಅಲ್ಲು ಅರ್ಜುನ್ ತಂದೆ ಘೋಷಿಸಿದ್ದಾರೆ.
ಹೈದರಾಬಾದ್ ಸಂಧ್ಯಾ ಥಿಯೇಟರ್ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ ಬೆನ್ನಲ್ಲೇ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಸುಮಾರು ೨ ಕೋಟಿ ರೂ. ಪರಿಹಾರ ಧನ ನೀಡುವುದಾಗಿ ಘೋಷಿಸಿದ್ದಾರೆ.
ಅಸ್ವಸ್ಥಗೊಂಡ ಮಗನ ಆರೈಕೆಗಾಗಿ ಅಲ್ಲು ಅರ್ಜುನ್ ೧ ಕೋಟಿ ರೂ. ನೀಡಲಿದ್ದು, ಉಳಿದ ೧ ಕೋಟಿ ರೂ.ವನ್ನು ಮೈತ್ರಿ ಮೇಕರ್ಸ್, ನಿರ್ದೇಶಕ ಸುಕುಮಾರ್ ಮುಂತಾದವರು ದೇಣಿಗೆ ನೀಡಲಿದ್ದಾರೆ ಎಂದು ಅಲ್ಲು ಅರವಿಂದ್ ತಿಳಿಸಿದ್ದಾರೆ.
ಅಲ್ಲು ಅರ್ಜುನ್ ಕಾಲ್ತುಳಿತ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ೧೪ ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ತೆಲಂಗಾಣ ಹೈಕೋರ್ಟ್ ಜಾಮೀನು ನೀಡಿದ್ದರಿಂದ ಹೊರಗೆ ಬಂದಿದ್ದು, ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.