ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಪತನಗೊಳ್ಳುವವರೆಗೂ ಶೂ, ಚಪ್ಪಲಿ ಮುಂತಾದ ಯಾವುದೇ ಪಾದರಕ್ಷೆ ಧರಿಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಶಪಥ ಮಾಡಿದ್ದಾರೆ.
ಕೊಯಮತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಡಿಎಂಕೆ ಪಕ್ಷದ ಆಡಳಿತದಿಂದ ಕಾನೂನು ಮತ್ತು ಸುರಕ್ಷತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಡಿಎಂಕೆ ಸರ್ಕಾರ ಪತನಗೊಳ್ಳುವವರೆಗೂ ನಾನು ಬರಿಗಾಲಲ್ಲಿ ನಡೆಯುತ್ತೇನೆ. ನಾನು ಚುನಾವಣೆ ಗೆಲ್ಲಲು ಹಣ ಹಂಚಲ್ಲ. ಹಣ ಕೊಡದೇ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಅಲ್ಲಿಯವರೆಗೂ ನಾನು ಚಪ್ಪಲಿ ಧರಿಸದೇ ಬರಿಗಾಲಲ್ಲಿ ನಡೆಯುತ್ತೇನೆ ಎಂದು ಅವರು ಹೇಳಿದರು.
ಇದೇ ವೇಳೆ ದುಷ್ಟಶಕ್ತಿಗಳನ್ನು ಹೊಡೆದೋಡಿಸಲು ನಾಳೆ 6 ಬಾರಿ ಚಾಟಿಯಿಂದ ಹೊಡೆದುಕೊಳ್ಳುವೆ ಹಾಗೂ ರಾಜ್ಯದಲ್ಲಿ ಮುರುಗನ್ ದೇವರಿಗಾಗಿ 48 ಗಂಟೆಗಳ ಉಪವಾಸ ಹಮ್ಮಿಕೊಂಡಿರುವುದಾಗಿ ಅಣ್ಣಾಮಲೈ ಹೇಳಿದರು.