Home ಅಪರಾಧ ಮಂಗಳೂರಿನಲ್ಲಿ 3 ವರ್ಷದಿಂದ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆ ಅರೆಸ್ಟ್

ಮಂಗಳೂರಿನಲ್ಲಿ 3 ವರ್ಷದಿಂದ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆ ಅರೆಸ್ಟ್

ಮಂಗಳೂರಿನ ಮುಕ್ಕ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆಯನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

by Editor
0 comments
arrest

ಮಂಗಳೂರಿನ ಮುಕ್ಕ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆಯನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿ ಅನರುಲ್ ಶೇಖ್​ (25) ಅವರನನ್ನು ಬಂಧಿಸಲಾಗಿದೆ.

ಅನರುಲ್ ಶೇಖ್ 3 ವರ್ಷಗಳ ಹಿಂದೆ ಅಂತಾರಾಷ್ಟ್ರಿಯ ಗಡಿರೇಖೆ ಲಾಲ್​​​ಗೋಲ್ ಮೂಲಕ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ್ದನು. ಬಳಿಕ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಿಂದ ಉಡುಪಿಗೆ ಬಂದಿದ್ದ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮುಕ್ಕ ಗ್ರಾಮದ ರೋಹನ್ ಎಸ್ಟೇಟ್​​ನಲ್ಲಿ ಅನರುಲ್​ ಶೇಖ್​​​ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಅನರುಲ್​ ಶೇಖ್ ಬಗ್ಗೆ ಖಚಿತ ಮಾಹಿತಿ ಪಡೆದ ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನರುಲ್ ಶೇಖ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ರಾಜ್ಯ ಸರ್ಕಾರದ ಸಂಧಾನ ಯಶಸ್ವಿ: ಆಶಾ ಕಾರ್ಯಕರ್ತೆಯರ ಮುಷ್ಕರ ವಾಪಸ್ ನಾನು ದೇವರಲ್ಲ, ನನ್ನಿಂದಲೂ ತಪ್ಪುಗಳು ಆಗಿವೆ: ಪ್ರಧಾನಿ ಮೋದಿ ಮನದ ಮಾತು ಪರೀಕ್ಷೆ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ! ಮಂಗಳೂರಿನಲ್ಲಿ 3 ವರ್ಷದಿಂದ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆ ಅರೆಸ್ಟ್ ಬೆಂಗಳೂರು ತ್ರಿಬಲ್ ಮರ್ಡರ್ ಕೇಸಲ್ಲಿ ಟ್ವಿಸ್ಟ್: ಹೋಂಗಾರ್ಡ್ ಕೊಂದಿದ್ದು ಪತ್ನಿಯನ್ನಲ್ಲ! ಜ.11ರಿಂದ 3 ದಿನ ಅಯೋಧ್ಯೆ ರಾಮಮಂದಿರ ವಾರ್ಷಿಕೋತ್ಸವ: 100 ಗಣ್ಯರಿಗೆ ಆಹ್ವಾನ ಗ್ರಾಹಕರ ದೂರು ತಿಂಗಳಲ್ಲಿ ಇತ್ಯರ್ಥಗೊಳಿಸದಿದ್ದರೆ ಬ್ಯಾಂಕ್ ಗೆ ಬೀಳುತ್ತೆ ದಂಡ! SHOCKING: 69 ಉಗ್ರರಿರುವ ಜೈಲಿನಲ್ಲಿ ಹಾರಾಡಿದ ಡ್ರೋಣ್: 8 ದಿನಗಳ ನಂತರ ಪತ್ತೆ! 2 ಲಕ್ಷ ಬ್ಯಾಂಕ್ ಉದ್ಯೋಗಕ್ಕೆ ಕತ್ತರಿ ಹಾಕಲಿದೆ ಎಐ! ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ಯುವತಿ ಕೊಲೆಗೈದ ಸಹದ್ಯೋಗಿ: ರಕ್ಷಿಸಲು ಬಾರದ ಜನ!